ಬೆಳ್ತಂಗಡಿ: ಚಾರ್ಮಾಡಿ ಘಾಟಿ ಬೆಳ್ತಂಗಡಿ ಹಾಗೂ ಮೂಡಿಗೆರೆ ಭಾಗದಲ್ಲಿ ತಾಲೂಕಿನಲ್ಲಿ ಕಳೆದೊಂದು ವಾರದಿಂದ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗುತ್ತಿದೆ.
ಈ ಮಧ್ಯೆ ದಟ್ಟ ಮಂಜು ಆವರಿಸಿದ ಪರಿಣಾಮ ಘಾಟಿ ಪ್ರದೇಶದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಶನಿವಾರ ಹಾಗೂ ರವಿವಾರ ಹೆಚ್ಚಿನ ಪ್ರವಾಸಿಗರು ಹಾಗೂ ಭಕ್ತರು ದೇವರ ದರ್ಶನಕ್ಕೆ ಬರುವವರು ಇರುವುದರಿಂದ ವಾಹನ ದಟ್ಟಣೆ ಹೆಚ್ಚಿರುವುದು ಸಾಮಾನ್ಯ. ಶನಿವಾರ ರಾತ್ರಿಯಿಂದ ರವಿವಾರದ ವರೆಗೆ ಘಾಟಿ ಪ್ರದೇಶದಲ್ಲಿ ದಟ್ಟ ಮಂಜು ಆವರಿಸಿರುವುದು ಕಂಡು ಬಂತು.
ಚಾರ್ಮಾಡಿ ಘಾಟಿಯಲ್ಲಿ ಮಂಜು ಕವಿದಿರುವುದರಿಂದ 5 ಅಡಿ ದೂರದಷ್ಟೂ ದಾರಿ ಕಾಣದಂತಾಗಿ ಸವಾರರು ಹೈರಾಣಾರಾಗಿದ್ದಾರೆ
ಮೂಡಿಗೆರೆ ತಾಲೂಕಿನ ಚಾರ್ಮಾಡಿ, ಬಣಕಲ್, ಕೊಟ್ಟಿಗೆಹಾರ, ಇತ್ತ ಬೆಳ್ತಂಗಡಿ ಭಾಗ, ಅಣ್ಣಪ್ಪಬೆಟ್ಟ ಸುತ್ತಮುತ್ತ ಮಂಜು ಮುಸುಕಿದ ವಾತಾವರಣ ಕಂಡು ಬಂದಿದ್ದು, ಚಾರ್ಮಾಡಿ ರಸ್ತೆಯಲ್ಲಿ ಒಂದೆಡೆ ಗುಡ್ಡ, ಮತ್ತೂಂದೆಡೆ ಪ್ರಪಾತ ಇದ್ದು, ಕೆಲವೊಮ್ಮೆ ಆನೆಗಳು ರಸ್ತೆಗೆ ಇಳಿಯುವುದರಿಂದ ಸವಾರರು ಬಹಳಷ್ಟು ಮುಂಜಾಗ್ರತಾ ಕ್ರಮ ವಹಿಸುವುದು ಅನಿವಾರ್ಯವಾಗಿದೆ.
ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/FxkiqQfrxlV57ZfFGy2ssw?mode=r_t