ರಾಮನಗರ: ಬೆಂಗಳೂರು ಮೈಸೂರು ಹೆದ್ದಾರಿಯ ಆರ್ಚಕರಹಳ್ಳಿ ಗ್ರಾಮದ ಬಳಿ ಚಲಾವಣೆಯ ವೇಳೆಯೇ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಭಾನುವಾರ ರಾತ್ರಿ (ಜು.6) ಸಂಭವಿಸಿದೆ.
ಘಟನೆಯಲ್ಲಿ ಸ್ಕೂಟರ್ ಸವಾರ ಪ್ರಾಣಪಾಯದಿಂದ ಪಾರಾಗಿದ್ದು, ಸ್ಕೂಟರ್ ಸವಾರಿ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು ಕೂಡಲೇ ಸವಾರ ಸ್ಕೂಟರನ್ನು ನಿಲ್ಲಿಸಿ ಬದಿಗೆ ಸರಿದಿದ್ದಾರೆ. ಅಷ್ಟರಲ್ಲಿ ಸ್ಕೂಟರ್ ಹೊತ್ತಿ ಉರಿಯಲಾರಂಭಿಸಿದೆ ಕೂಡಲೇ ಅಲ್ಲಿನ ಸ್ಥಳೀಯರು ಸೇರಿ ನೀರು ಹಾಕಿ ಬೆಂಕಿ ನಂದಿಸಿದ್ದಾರೆ.
ರಾಮನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/FxkiqQfrxlV57ZfFGy2ssw?mode=r_t