ಉಡುಪಿ: ಮಹಿಳೆಯೊಬ್ಬಳು ಆನ್‌ಲೈನ್ ಮೂಲಕ ಮೀನಿನ ಬಲೆ ಖರೀದಿಸಿದ ಸಾವಿರಾರು ರೂ. ವಂಚನೆಗೊಳಪಟ್ಟಿರುವ ಬಗ್ಗೆ ಉಡುಪಿಯ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಡಿಬೇಂಗ್ರೆಯ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಮೀನಿನ ಬಲೆಯನ್ನು ಬುಕ್ ಮಾಡಿದ್ದು, ಈ ಬಗ್ಗೆ ಒಬ್ಬ ಅಪರಿಚಿತ ವ್ಯಕ್ತಿ ಕರೆ ಮಾಡಿ ಮೀನಿನ ಬಲೆಯನ್ನು ಡೆಲಿವರಿ ಕೊಡಲು ಹಣ ಪಾವತಿ ಮಾಡುವಂತೆ ತಿಳಿಸಿದ್ದು, ಅದರಂತೆ ಮಹಿಳೆ ಜು.2ರಿಂದ 4ರ ಮಧ್ಯಾವಧಿಯಲ್ಲಿ ವಿವಿಧ ಹಂತಗಳಲ್ಲಿ ಒಟ್ಟು 41,250ರೂ. ಹಣವನ್ನು ಪಾವತಿಸಿದ್ದರು. ಆದರೆ ಅಪರಿಚಿತ ವ್ಯಕ್ತಿಯು ಈವರೆಗೂ ಮೀನಿನ ಬಲೆಯನ್ನು ಕಳುಹಿಸಿಕೊಡದೇ ಹಣವನ್ನು ವಾಪಾಸು ನೀಡದೇ ವಂಚನೆ ಮಾಡಿರುವುದಾಗಿ ದೂರಲಾಗಿದೆ.
ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/FxkiqQfrxlV57ZfFGy2ssw?mode=r_t