ಕರಂಬಾರು ಶಾಲೆಯಲ್ಲಿ ಉಚಿತ ನೇತ್ರ ತಪಾಸಣೆ

ಕರಂಬಾರು: ಇನ್ನರ್ ವಿಲ್ ಕ್ಲಬ್, ಮಂಗಳೂರು ದಕ್ಷಿಣ.ನಾಗರಿಕ ಸೇವಾ ಸಮಿತಿ (ರಿ),ಅಂಬೇಡ್ಕರ್ ನಗರ , ಕರಂಬಾರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬೊಂದೆಲ್ ,ನಮ್ಮ ಕ್ಲಿನಿಕ್ ಮಳವೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಕರಂಬಾರು ಶಾಲಾ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಭೋಜರಾಜ್ ಕೋಟ್ಯಾನ್( ಅಧ್ಯಕ್ಷರು ನಾಗರಿಕ ಸೇವಾ ಸಮಿತಿ ರಿ.ಅಂಬೇಡ್ಕರ್ ನಗರ ಕರಂಬಾರು), ಸಮಾಜಮುಖಿ ಕೆಲಸ ಕಾರ್ಯವನ್ನು ಮಾಡಿ ಕೊಂಡು ಬಂದಿರುವ ನಾಗರೀಕ ಸೇವಾ ಸಮಿತಿಯು ಉಚಿತ ನೇತ್ರ ತಪಾಸಣ ಮತ್ತು ಚಿಕಿತ್ಸ ಶಿಬಿರ ನಡೆಯುತ್ತಿರುವುದು ಜನರ ಮೆಚ್ಚುಗೆ ಪಾತ್ರವಾಗಿದೆ.ಮುಂದಿನ ದಿನಗಳಲ್ಲಿ ಒಳ್ಳೆಯ ಕೆಲಸ ಕಾರ್ಯ ಮಾಡಲು ನಮ್ಮ ಸಂಘದಿಂದ ಪ್ರಯತ್ನಿಸಲಾಗುದು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಮತಿ ಸವಿತಾ ಜಿ ಎಸ್ (ವೈದ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಬೊಂದೆಲ್) ಇವರು ಕಣ್ಣಿನ ಹಾರೈಕೆ ಮತ್ತು ಕಣ್ಣಿನ ಚಿಕಿತ್ಸೆಯ ಅಗತ್ಯತೆ ಯ ಬಗ್ಗೆ ತಿಳಿಸಿದರು .ಇಂತಹ ಒಳ್ಳೆಯ ಕಾರ್ಯಕ್ರಮವನ್ನು ಜನರು ಸದುಪಯೋಗ ಪಡೆದು ಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಶೀಜಾ ನಂಬಿಯಾರ್(ಅಧ್ಯಕ್ಷರು ಇನ್ನರ್ ವೀಲ್ ಕ್ಲಬ್ ಮಂಗಳೂರು), ಡಾ.ಪ್ರೇಮ್ (ವೈದ್ಯಾಧಿಕಾರಿ ಪ್ರಸಾದ್ ನೇತ್ರಾಲಯ ಮಂಗಳೂರು) , ಶ್ರೀಮತಿ ಕಲಾವತಿ ಬಿ (ಕಾರ್ಯದರ್ಶಿಗಳು ಇನ್ನರ್ ವೀಲ್ ಕ್ಲಬ್ ಮಂಗಳೂರು ದಕ್ಷಿಣ), ಶ್ರೀಮತಿ ಶಬರಿ ಭಂಡಾರಿ (ಮಾಜಿ ಅಧ್ಯಕ್ಷರು ಇನ್ನರ್ ವಿಲ್ ಕ್ಲಬ್ ಮಂಗಳೂರು ದಕ್ಷಿಣ), ಶ್ರೀಮತಿ ಲತಾ ಅಶೋಕ್ (ಮಾಜಿ ಅಧ್ಯಕ್ಷರು ಇನ್ನರ್ ವಿಲ್ ಕ್ಲಬ್ ಮಂಗಳೂರು ದಕ್ಷಿಣ), ಶ್ರೀ ಲಕ್ಷ್ಮಣ್ ಬಂಗೇರ (ಮಾಜಿ ಸದಸ್ಯರು ಗ್ರಾಮ ಪಂಚಾಯತ್ ಮಳವೂರು), ಶ್ರೀಮತಿ ಶಶಿಕಲಾ (ಮಾಜಿ ಸದಸ್ಯರು ಗ್ರಾಮ ಪಂಚಾಯತ್ ಮಳವೂರು ), ಶ್ರೀಮತಿ ಗಾಯತ್ರಿ (ಸ್ಟಾಫ್ ನರ್ಸ್ ನಮ್ಮ ಕ್ಲಿನಿಕ್ ಮಳವೂರು ) ಆಗಮಿಸಿದ್ದರು.

ಸುಮಾರು 250ಕ್ಕೂ ಅಧಿಕ ಮಂದಿ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು .ಈ ಸಂದರ್ಭದಲ್ಲಿ ಬೋಂದೆಲ್ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ.ಸವಿತಾ ಜಿ. ಎಸ್ ರವರನ್ನು ಸನ್ಮಾನಿಸಲಾಯಿತು. ಕುಮಾರಿ ತೃಪ್ತಿ ಬಿ.ಕೆ ಕಾರ್ಯಕ್ರಮ ನಿರೂಪಿಸಿದರು .ರಾಕೇಶ್ ಕುಂದರ್ ಸ್ವಾಗತಿಸಿ,ನವೀನ್ ಚಂದ್ರ ಸಾಲ್ಯಾನ್ ವಂದಿಸಿದರು .

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj

error: Content is protected !!