ಬೆಂಗಳೂರು: ಕುಖ್ಯಾತ ದರೋಡೆಕೋರರ ತಂಡವೊಂದು ಹಾಡಹಗಲೇ 2 ಕೋಟಿ ರೂಪಾಯಿ ದರೋಡೆಗೈದ ಘಟನೆ ವಿದ್ಯಾರಣ್ಯಪುರಂನ ಎಂಎಸ್ ಪಾಳ್ಯದ ಎಕೆ ಎಂಟರ್ ಪ್ರೈಸ್ ಶಾಪ್‌ನಲ್ಲಿ ನಡೆದಿದೆ. ಕೆಂಗೇರಿಯ ಶ್ರೀಹರ್ಷ ಹಣ ಕಳೆದುಕೊಂಡವರು.
ಶ್ರೀಹರ್ಷ ಅವರ ಹೊಸ ಕಂಪೆನಿಗೆ ಜಪಾನ್ನಿಂದ ಯಂತ್ರ ತರಿಸಲು ತಮ್ಮ ಬಳಿ ಇದ್ದ 2 ಕೋಟಿ ರೂ. ಹಣವನ್ನು USDT ಡಾಲರ್ ಮೂಲಕ ಕ್ರಿಪ್ಟೋಕರೆನ್ಸಿಗೆ ರೂ ಡಾಲರ್ ರೂಪಕ್ಕೆ ಪರಿವರ್ತಿಸಲು ಮುಂದಾಗಿದ್ದರು. ಈ ವೇಳೆ ಸ್ನೇಹಿತರ ಮೂಲಕ ಜೂನ್ 25ರಂದು ಮಧ್ಯಾಹ್ನ 3 ಗಂಟೆಯಲ್ಲಿ ಬೆಂಜಮಿನ್ ಹರ್ಷ ಎಂಬಾತ ಎ.ಕೆ. ಎಂಟರ್ ಪ್ರೈಸ್ ಶಾಪ್‌ನಲ್ಲಿ ಶ್ರೀಹರ್ಷಗೆ ಭೇಟಿಯಾಗಿದ್ದ. ಬಳಿಕ ಬೆಂಜಮಿನ್ ಮತ್ತು ಇಬ್ಬರು ಸ್ನೇಹಿತರು 2 ಕೋಟಿ ಹಣ ಎಣಿಕೆ ಮಾಡುತ್ತಿದ್ದರು. ಇದೇ ವೇಳೆ 6-7 ಆಗಂತುಕರು ಶಾಪ್ಗೆ ಎಂಟ್ರಿ ಕೊಟ್ಟಿದ್ದಾರೆ.
ಬಳಿಕ ಶ್ರೀಹರ್ಷ ಕತ್ತಿಗೆಗೆ ಚಾಕು ಇಟ್ಟು, ಶಾಪ್ನಲ್ಲಿದ್ದ ಶ್ರೀ ಹರ್ಷ, ಬೆಂಜಮಿನ್ ಮತ್ತು ಸ್ನೇಹಿತರನ್ನು ಕೂಡಿ ಹಾಕಿ 2 ಕೋಟಿ ಹಣ ಚೀಲಕ್ಕೆ ತುಂಬಿಕೊಂಡು ಎಸ್ಕೇಪ್ ಆಗಿದ್ದಾರೆ. ಸದ್ಯ ಈ ಘಟನೆ ಬಗ್ಗೆ ಶ್ರೀಹರ್ಷ ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದಾರೆ.
ಈ ಕೃತ್ಯದಲ್ಲಿ ಬೆಂಜಮಿನ್ ಹರ್ಷ ತಂಡ ಕೈವಾಡ ಇರುವುದರಿಂದ ಇವರ ಮೇಲೂ ದೂರು ದಾಖಲಾಗಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಾಗೇಯೆ ದರೋಡೆ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝