ಮಂಗಳೂರು: ಭಾರೀ ಮಳೆಯಿಂದಾಗಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ 29 ರಲ್ಲಿ ಉಂಟಾಗಿದ್ದ ಪ್ರವಾಹ ಪೀಡಿತ ಪ್ರದೇಶಕ್ಕೆ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪತ್ತುಮುಡಿ ಜನತಾ ಡಿಲಕ್ಸ್ ಬಳಿ ನೆರೆ ಹಾವಳಿ ಉಂಟಾಗಿದ್ದು, ಮುಂದೆ ಈ ಭಾಗದಲ್ಲಿ ಅಂತಹ ಪರಿಸ್ಥಿತಿ ಮರುಕಳಿಸದಂತೆ ಅಗತ್ಯ ಕ್ರಮ ಮೊದಲಾದ ವಿಷಯಗಳ ಬಗ್ಗೆ ಸ್ಥಳೀಯರೊಂದಿಗೆ ಕಾಮತ್ ಚರ್ಚಿಸಿದರು. ಮುಖ್ಯವಾಗಿ ರಾಜಕಾಲುವೆಗಳಿಗೆ ತಡೆಗೋಡೆ ಹಾಗೂ ಈಗಾಗಲೇ ಇರುವ ತಡೆಗೋಡೆಗಳ ಎತ್ತರ ಹೆಚ್ಚಿಸುವ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಿಕಟ ಪೂರ್ವ ಪಾಲಿಕೆ ಸದಸ್ಯೆ ಲೀಲಾವತಿ ಪ್ರಕಾಶ್, ಬಿಜೆಪಿ ಪ್ರಮುಖರಾದ ಜಯರಾಜ್ ಕೊಟ್ಟಾರಿ, ರಿತೇಶ್ ಬಲ್ಲಾಲ್‌ಬಾಗ್, ಪ್ರಸಾದ್ ಆಚಾರಿ, ನಾರಾಯಣ ಭಂಡಾರಿ, ವೆಂಕಟೇಶ್, ನಟರಾಜ್, ರಜನಿ ಶೆಟ್ಟಿ, ವಿಠ್ಠಲ್, ಪ್ರಕಾಶ್ ಕೊಡಿಯಾಲ್‌ಬೈಲ್ ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝