ಬಂಟ್ವಾಳ: ಪಲ್ಟಿ ಹೊಡೆದ ಲಾರಿ- ಕಾರ್ಮಿಕ ಮೃತ್ಯುವಶ

ಬಂಟ್ವಾಳ: ರಾಕ್ಷಸ ಮಳೆಯ ನೀರು ರಸ್ತೆಯಲ್ಲೇ ಹರಿದ ಪರಿಣಾಮ ಲಾರಿಯ ಚಕ್ರಗಳು ಸ್ಲಿಪ್‌ ಆಗಿ ಪಲ್ಟಿ ಹೊಡೆದಿದ್ದು, ಕಾರ್ಮಿಕನೋರ್ವ ಮೃತಪಟ್ಟ ಘಟನೆ ಬಂಟ್ವಾಳದಲ್ಲಿ ಸಂಭವಿಸಿದೆ. ಜಾರ್ಖಾಂಡ್ ಮೂಲದ ನಿರ್ಮಲಾ ಅನ್ಸ್ತಾ(32) ಮೃತಪಟ್ಟ ದುರ್ದೈವಿ. ಲಾರಿ ಚಾಲಕ ಸುಜಿತ್ ಹಾಗೂ ಕ್ಲೀನರ್ ಸಿ. ಮೋಹನ್ ಮುರ್ಮ ಅಪಾಯದಿಂದ ಪಾರಾಗಿದ್ದಾರೆ.


ಉಡುಪಿಯಿಂದ ಅಕ್ಕಿ ಲೋಡ್ ಮಾಡಿಕೊಂಡು ಮೂಡಬಿದಿರೆ ರಸ್ತೆಯಾಗಿ ಬಂಟ್ವಾಳಕ್ಕೆ ಬರುತ್ತಿತ್ತು. ಬಂಟ್ವಾಳದ ಎಸ್‌ವಿ.ಎಸ್. ಕಾಲೇಜು ಬಳಿ ಬರುವಾಗ ಅತಿಯಾದ ಮಳೆಯಿಂದಾಗಿ ದಿಢೀರ್‌ ಚಾಲಕನ ನಿಯಂತ್ರಣ ಕಳೆದುಕೊಂಡು ಲಾರಿ ಪಲ್ಟಿಯಾಗಿದೆ. ಲಾರಿಯ ಹಿಂಭಾಗದಲ್ಲಿ ಅಕ್ಕಿ ಮೇಲೆಯೇ ಕುಳಿತಿದ್ದ ಕಾರ್ಮಿಕ ನಿರ್ಮಲಾ ಅನ್ಸ್ತಾ ರಸ್ತೆಗೆ ಎಸೆಯಲ್ಪಟ್ಟು ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್ಐ ಸುತೇಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಾರಿಯ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.

error: Content is protected !!