ಬೆಂಗಳೂರು: ಚೈತ್ರಾ ಕುಂದಾಪುರ ತನ್ನನ್ನು ಕೊಲೆ ಮಾಡಲು ಸುಪಾರಿ ನೀಡಿದ್ದಾರೆ ಎಂದು ತಂದೆ ಬಾಲಕೃಷ್ಣ ನಾಯಕ್ ಪೊಲೀಸರಿಗೆ ದೂರು ನೀಡಿದ್ದಾರೆ. ಹಣಕಾಸಿನ ವ್ಯವಹಾರ ಮತ್ತು ಚೈತ್ರಾ ಮದುವೆಗೆ ಸಂಬಂಧಿಸಿ ತಾನು ಹೇಳಿಕೆ ನೀಡಿದ್ದಕ್ಕೆ ಕೊಲೆಗೆ ಯತ್ನ ನಡೆಯುತ್ತಿದೆ ಎಂದು ಠಾಣೆಯ ಮೆಟ್ಟಿಲೇರಿದ್ದಾರೆ.
ದೂರಿನಲ್ಲಿ ಚೈತ್ರಾ ತನ್ನ ಗೆಳೆಯರೊಂದಿಗೆ ಸೇರಿ ಕೋಟ್ಯಂತರ ರೂಪಾಯಿಗಳ ಹಣಕಾಸಿನ ವ್ಯವಹಾರಗಳನ್ನು ನಡೆಸುತ್ತಿದ್ದಳು ಎಂದು ಆರೋಪಿಸಿದ್ದಾರೆ. ʻಒಂದು ರಾತ್ರಿ ಚೈತ್ರಾ ಕೋಟಿಗಟ್ಟಲೆ ರೂಪಾಯಿಗಳನ್ನು ತಂದು ಎಣಿಸುತ್ತಿರುವುದನ್ನು ಕಂಡು ಭಯಗೊಂಡೆ. ಈ ಬಗ್ಗೆ ಪ್ರಶ್ನಿಸಿದಾಗ ಚೈತ್ರಾ ನನ್ನನ್ನು ದಬಾಯಿಸಿದಳು. ಈ ಹಣ ಉದ್ಯಮಿ ಗೋವಿಂದ ಬಾಬು ಪೂಜಾರಿಯದ್ದು ಎಂದು ನಂತರ ತಿಳಿದುಬಂದಿತು. ಈ ವಿಷಯವನ್ನು ಹೊರಗೆ ಹೇಳಬಹುದೆಂಬ ಭಯದಿಂದ ಚೈತ್ರಾ ಮತ್ತು ನನ್ನ ಪತ್ನಿ ರೋಹಿಣಿ ನನಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆʼ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಈ ಪ್ರಕರಣ ಭಾರೀ ಕುತೂಹಲ ಕೆರಳಿಸಿದೆ.