ಗ್ಯಾಂಗ್‌ ರೇಪ್‌ ಆರೋಪಿಗಳ ಮೆರವಣಿಗೆ!


ಹಾವೇರಿ: ಹಾನಗಲ್ ನಲ್ಲಿ 2024ರ ಜನವರಿ 8ರಂದು ನಡೆದಿದ್ದ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣವೊಂದರಲ್ಲಿ 19 ಆರೋಪಿಗಳು ಜೈಲುಪಾಲಾಗಿದ್ದು ಇವರಲ್ಲಿ 12 ಆರೋಪಿಗಳು 10 ತಿಂಗಳ ಹಿಂದೆಯೇ ಜಾಮೀನು ಪಡೆದಿದ್ದರು. ನಿನ್ನೆ ಪ್ರಕರಣದ ಪ್ರಮುಖ ಏಳು ಆರೋಪಿಗಳಿಗೆ ಜಾಮೀನು ದೊರೆತಿದ್ದು ಅವರನ್ನು ಹಾವೇರಿ ಜಿಲ್ಲೆಯ ಅಕ್ಕಿ ಆಲೂರು ಪಟ್ಟಣದಿಂದ ರಾಜಾರೋಷವಾಗಿ ಐದು ಕಾರುಗಳಲ್ಲಿ 20ಕ್ಕೂ ಹೆಚ್ಚು ಮಂದಿ ಸಹಚರರು ರೋಡ್ ಶೋ ನಡೆಸಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಏಳು ಆರೋಪಿಗಳಾದ ಅಪ್ತಾಬ್ ಚಂದನಕಟ್ಟಿ, ಮದರ್ ಸಾಬ್ ಮಂಡಕ್ಕಿ, ಸಮಿವುಲ್ಲಾ ಲಾಲನವರ, ಮಹಮದ್ ಸಾದಿಕ್ ಅಗಸಿಮನಿ, ಶೊಯಿಬ್ ಮುಲ್ಲಾ, ತೌಸಿಪ್ ಚೋಟಿ, ಮತ್ತು ರಿಯಾಜ್ ಸಾವಿಕೇರಿ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಆರೋಪಿಗಳ ರೋಡ್ ಶೋ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿದ್ದು ಇದಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಯೇ ಹೊಣೆ ಎಂದು ಆರೋಪಿಸಿದ್ದಾರೆ.

error: Content is protected !!