ಭಾರೀ ಮಳೆಗೆ ಉಡುಪಿ ತತ್ತರ: ಮಣಿಪಾಲದ ರಸ್ತೆಯಲ್ಲಿ ಧುಮ್ಮಿಕ್ಕಿದ ಜಲಧಾರೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಅಲ್ಲಲ್ಲಿ ಕೃತಕ ನೆರೆ ಉಂಟಾಗಿದೆ. ಇದರಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.

ಉಡುಪಿ -ಮಣಿಪಾಲ ರಾಷ್ಟ್ರೀಯ ಹೆದ್ದಾರಿ 169 ಎ ರಲ್ಲಿ ಮಣಿಪಾಲ ಐನಾಕ್ಸ್‌ನಿಂದ ಸಿಂಡಿಕೇಟ್ ಸರ್ಕಲ್ ಮಧ್ಯೆ ಸಿಗುವ ರಸ್ತೆಯ ಬದಿ ತುಂಬಿಸಲಾದ ಮಣ್ಣು ಭಾರೀ ಮಳೆಯಿಂದ ಕಿತ್ತು ಬಂದಿದೆ.

ಇದರಿಂದಾಗಿ ಕಲ್ಲು ಮಿಶ್ರಿತ ನೀರು ರಸ್ತೆಯಲ್ಲಿ ಪ್ರವಾಹದಂತೆ ಹರಿದಿದೆ.  ಹಲವು ವಾಹನಗಳಿಗೆ ಹಾನಿಯಾಗಿದಲ್ಲದೆ ರಸ್ತೆ ಬದಿ ಬೃಹತ್ ಅಪಾಯಕಾರಿ ತೋಡು ಸೃಷ್ಠಿಯಾಗಿದೆ.  ಐನಾಕ್ಸ್ ಸಮೀಪದ ಸೆಂಟ್ರಲ್ ಪಾರ್ಕ್ ಸಂಕೀರ್ಣದ ಕೆಳ ಅಂತಸ್ತಿನಲ್ಲಿರುವ ಅಂಗಡಿಗಳಿಗೆ ಕೆಸರು ನೀರು ಹಾಗೂ ಮಣ್ಣುಗಳು ನುಗ್ಗಿವೆ. ಇದರಿಂದ ಅಪಾರ ಹಾನಿ ಸಂಭವಿಸಿದೆ.

ಸ್ಥಳೀಯರ ಸಹಕಾರದಿಂದ ಜೆಸಿಬಿ ಯಂತ್ರದ ಮೂಲಕ ರಸ್ತೆ ಮಧ್ಯೆ ಬಿದ್ದಿರುವ ಕಲ್ಲುಗಳನ್ನು ತೆರವುಗೊಳಿಸಲಾಗಿದೆ. ಧಾರಾಕಾರ ಮಳೆಯಿಂದಾಗಿ ಉಡುಪಿಯ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತ ಉಂಟಾಗಿದೆ. ನೀರು ನುಗ್ಗಿದ ರಸ್ತೆಗಳ ಪಕ್ಕದಲ್ಲಿರುವ ಕೆಲವು ಅಂಗಡಿಗಳನ್ನು ಬಂದ್‌ ಮಾಡಲಾಗಿದೆ. ಸಗ್ರಿಯಲ್ಲಿ ತೋಡು ಕುಸಿತ, ದೊಡ್ಡಣಗುಡ್ಡೆಯಲ್ಲಿ ಮರ ಬಿದ್ದ ಪರಿಣಾಮ ವಿವಿಧೆಡೆ ಸಂಚಾರದಲ್ಲಿ ವ್ಯತ್ಯಯ ಕಂಡು ಬಂತು. ತೋಡುಗಳನ್ನು ತೆರವುಗಗೊಳಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ.

ಶಾಸಕ ಯಶ್‌ಪಾಲ್‌ ಸುವರ್ಣ, ಅ ನಗರಸಭೆ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.

 

ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ:

https://www.youtube.com/shorts/rmCZUYlqMPQ?feature=share

error: Content is protected !!