ಗೋಳಿದಡಿ ಗುತ್ತಿನ ವರ್ಸೋದ ಪರ್ಬೊದ ಸಂಭ್ರಮಕ್ಕೆ ವೈಭವದ ತೆರೆ: ಸಾವಿರಾರು ಮಂದಿ ಭಾಗಿ

ಗುರುಪುರ: ವೇದ ಕೃಷಿಕ ಬ್ರಹ್ಮ ಋಷಿ, ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಕೆ.ಎಸ್. ನಿತ್ಯಾನಂದ ಗುರುಗಳ ಮಾರ್ಗದರ್ಶನ ಮತ್ತು ನಿರ್ದೇಶನದಲ್ಲಿ, ಗುರುಪುರ ಗೋಳಿದಡಿ ಗುತ್ತಿನ ಯಜಮಾನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿಯವರ ನೇತೃತ್ವದಲ್ಲಿ 15ರ ಬುಧವಾರ ಗೋಳಿದಡಿ ಗುತ್ತಿನಲ್ಲಿ ಆರಂಭಗೊಂಡಿದ್ದ ಮೂರು ದಿನಗಳ ವರ್ಸೋದ ಪರ್ಬೋ ದ ಸಂಭ್ರಮ ಶನಿವಾರ ರಾತ್ರಿ ಅರೆಹೊಳೆ ಪ್ರತಿಷ್ಠಾನದವರ ನೃತ್ಯ ವೈಭವದೊಂದಿಗೆ ಸಂಪನ್ನಗೊಂಡಿತು.

ಶನಿವಾರ ಬೆಳಿಗ್ಗೆ ಪುರೋಹಿತರಿಂದ ಹೋಮ ಹವನಾದಿ ಧಾರ್ಮಿಕ ವಿಧಿಗಳು ನಡೆದವು. 9ಗಂಟೆಯಿಂದ ಮಧ್ಯಾಹ್ನ 2ರವರೆಗೆ ಶ್ರೀ ವೈದ್ಯನಾಥೇಶ್ವರ ವೇದಿಕೆಯಲ್ಲಿ ನಡೆದ ಜಿಲ್ಲೆಯ ವಿವಿಧ ಭಜನಾ ತಂಡಗಳ ಭಜನಾ ಸಂಕೀರ್ತನೆ ಸೇರಿದ್ದ ಜನರಿಗೆ ಭಕ್ತಿಲೋಕದ ಅನುಭವ ನೀಡಿತು.

ಮಧ್ಯಾಹ್ನ 2:30ರಿಂದ ಕಲಾರತ್ನ ಶ್ರೀ ಶಂ.ನಾ.ಅಡಿಗ ನಡೆಸಿಕೊಟ್ಟ ಭೂಕೈಲಾಶ ಹರಿಕಥಾ ಪ್ರವಚನ, ಸಂಜೆ 5ರಿಂದ ವೇದಾಂತಿ ಡಾ.ಬಿ.ವಿ. ಕುಮಾರಸ್ವಾಮಿ ಬೆಂಗಳೂರು ನಡೆಸಿಕೊಟ್ಟ ಭಗವದ್ಗೀತಾ ಪ್ರವಚನ ಧರ್ಮದ ಸಾರವನ್ನು ಉಣ ಬಡಿಸಿದರೆ, ರುಚಿಕಟ್ಟಾದ ಮತ್ತು ವ್ಯವಸ್ಥಿತವಾದ ರುಚಿಯಾದ ಬಾಳೆ ಎಲೆ ಊಟ ಸೇರಿದ್ದ ಜನರ ಹಸಿವನ್ನು ತನಿಸಿತು.ರಾತ್ರಿ 8ರಿಂದ ಅರೆಹೊಳೆ ಪ್ರತಿಷ್ಠಾನದವರು ಪ್ರದರ್ಶಿಸಿದ ಮನಮೋಹಕ ನೃತ್ಯ ವೈಭವದೊಂದಿಗೆ ವರ್ಸೋದ ಪರ್ಬೊದ ಸಂಭ್ರಮ ಸಂಪನ್ನಗೊಂಡಿತು.


ಶ್ರೀ ಗುರು ಮಹಾಕಾಲೇಶ್ವರ ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ)ನ ಕಾರ್ಯದರ್ಶಿ ಉಷಾ ಪ್ರಸಾದ ಶೆಟ್ಟಿ ಮತ್ತು ಟ್ರಷ್ಟಿಗಳು, ಗುತ್ತಿನ ಚಾವಡಿ ಮಿತ್ರರು ಪ್ರಮುಖರು ಹಾಗೂ ಜಿಲ್ಲೆ ಮತ್ತು ಹೊರಜಿಲ್ಲೆಗಳ ನೂರಾರು ಜನರು ಪಾಲ್ಗೊಂಡಿದ್ದರು.

error: Content is protected !!