ಪಾಕಿಸ್ತಾನ ಶೆಲ್ ದಾಳಿಗೆ ಅವಳಿ ಮಕ್ಕಳು ಮೃತ, ನಲುಗಿದ ಕುಟುಂಬ!

ಶ್ರೀನಗರ: ಜಮ್ಮು ಕಾಶ್ಮೀರ ದ ಗಡಿಭಾಗ ಪೂಂಚ್‌ನಲ್ಲಿ ಪಾಕಿಸ್ತಾನಿ ಶೆಲ್ ದಾಳಿಗೆ ಅವಳಿ ಮಕ್ಕಳು ಸಾವಿಗೀಡಾಗಿದ್ದರೆ ತಂದೆ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ.]

ದಾಳಿಯಲ್ಲಿ 12 ವರ್ಷದ ಅವಳಿ ಸಹೋದರ ಮತ್ತು ಸಹೋದರಿ ಜೋಯಾ ಮತ್ತು ಅಯಾನ್ ಸಾವನ್ನಪ್ಪಿದ್ದಾರೆ. ಅವರ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಕೂಡ ಸಾವನ್ನಪ್ಪಿದ್ದು ಮನೆ ಸಂಪೂರ್ಣ ಛಿದ್ರಗೊಂಡಿದೆ.

ಮೇ 5 ರ ರಾತ್ರಿ, ಪಾಕಿಸ್ತಾನಿ ಸೇನೆಯ ಶೆಲ್ ದಾಳಿಯಿಂದ ಇಡೀ ಕುಟುಂಬ ಸರ್ವನಾಶವಾಗಿದ್ದರೆ ಮಕ್ಕಳ ತಂದೆ 48 ವರ್ಷದ ರಮೀಜ್ ಖಾನ್ ಪ್ರಸ್ತುತ ಜಮ್ಮು ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದಾರೆ.

error: Content is protected !!