ಹುಬ್ಬಳ್ಳಿ: 12ರ ಹರೆಯದ ಬಾಲಕ ತಿಂಡಿ ತಿನ್ನುವ ವಿಚಾರದಲ್ಲಿ ತನ್ನ ಸ್ನೇಹಿತನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿ ನಗರದ ಮೂರು ಸಾವಿರ ಮಠದ ಬಳಿ ಬೆಳಕಿಗೆ ಬಂದಿದೆ. ಚೇತನ್ (1೪) ಹತ್ಯೆಯಾದ ಬಾಲಕ. ನಿನ್ನೆ ಸಂಜೆ ಆಟವಾಡುವಾಗ ಇಬ್ಬರು ಸ್ನೇಹಿತರ ನಡುವೆ ಜಗಳ ನಡೆದಿದ್ದು ಈ ವೇಳೆ 14 ವರ್ಷದ ಬಾಲಕ ಚೇತನ್ ಗೆ ಸಾಯಿ ಚಾಕುವಿನಿಂದ ಇರಿದಿದ್ದ. ಗಂಭೀರವಾಗಿ ಗಾಯಗೊಂಡ ಚೇತನ್ ನನ್ನು ಆಸ್ಪತ್ರೆಗೆ ದಾಖಲಿಸುವ ದಾರಿಮಧ್ಯೆ ಸಾವನ್ನಪ್ಪಿದ್ದಾನೆ.