ಮಂಗಳೂರು: ಪ್ರವೀಣ್ ನೆಟ್ಟಾರ್ ಹತ್ಯೆಯ ಬಳಿಕ ಒಂದೂವರೆ ವರ್ಷಗಳ ಬಳಿಕ ಸುಹಾಸ್ ಶೆಟ್ಟಿ ಹತ್ಯೆ ನಡೆದಿದೆ. ಈ ಹತ್ಯೆಯಲ್ಲಿ ಪಿಎಫ್‌ಐ ಸಂಘಟನೆಯಲ್ಲಿದ್ದವರೇ ಎನ್ನುವುದು ಬಯಲಾಗುತ್ತಿದೆ. ಇದು ಕ್ರಿಮಿನಲ್ ಹಿನ್ನೆಲೆಯಿಂದಾಗ ಕೊಲೆಯಲ್ಲ, ಇದು ಮುಸ್ಲಿಂ ಮೂಲಭೂತವಾದಿಂದಾಗಿ ನಡೆದ ಕೊಲೆ. ಆದ್ದರಿಂದ ಈ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ| ಬ್ರಿಜೇಶ್ ಚೌಟ ಆಗ್ರಹಿಸಿದ್ದಾರೆ.
ಅವರು ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಡಿಸಿಎಂ ಹಾಗೂ ಸ್ಪೀಕರ್ ಆರೋಪಿಗಳನ್ನು ಸಂತೈಸಿಕೊಂಡು ಹೋದ ಹಾಗೆ ಹೋಗಿದ್ದಾರೆ. ಗೃಹಸಚಿವರು ಮೊದಲೇ ಗೃಹಸಚಿವರು ಆತನ ಮೇಲೆ ರೌಡಿಶೀಟರ್ ಕೇಸಿದೆ. ಇದು ಕ್ರಿಮಿನಲ್ ಹಿನ್ನೆಲೆಯಿಂದ ಆ ಕೊಲೆ ಎಂದು ಹೇಳಿ ಕರವಾಳಿಯ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಕೆಲಸ ಮಾಡಿದ್ದಾರೆ. ಸ್ಪೀಕರ್ ಅವರು ತನಿಖೆಯ ತನಿಖೆಯ ಮುನ್ನವೇ ಎ1 ಆರೋಪಿಗೆ ಕ್ಲೀನ್‌ಚಿಟ್ ನೀಡಿ ಸಮರ್ಥಿಸುವ ಆತುರ ಏನಿತ್ತು? ಈ ಕೊಲೆಯಲ್ಲಿ ಮತೀಯ ಮೂಲಭೂತವಾದವಿದ್ದು ಈ ತನಿಖೆಯನ್ನು ಎನ್‌ಐಎಗೆ ವಹಿಸುವಂತೆ ಚೌಟ ಆಗ್ರಹಿಸಿದರು.
ಸೆಪ್ಟೆಂಬರ್ 2022ರಲ್ಲಿ ಪಿಎಫ್‌ಐ ಬ್ಯಾನ್ ಆಗಿದೆ. ಈ ಬಗ್ಗೆ ಇಂಡಿಯಾ ಟುಡೆ ತನ್ನ ತನಿಖಾ ವರದಿಯಲ್ಲಿ, ಕರ್ನಾಟಕದಲ್ಲಿ ನಡೆಯುತ್ತಿರವ ಈ ಪ್ರಕರಣಗಳು ಇಸ್ಲಾಂ ಮೂಲಭೂತದ ಬಗ್ಗೆ ತಿಳಿಸಿದೆ. ಇದರ ಪ್ರಕಾರ ಅಂದು ಪಿಎಫ್‌ಐಯಲ್ಲಿ ಇದ್ದವರು ಎಸ್‌ಡಿಪಿಐ ಅಲ್ಲಿ ಇದ್ದಾರೆ. ಎಸ್‌ಡಿಪಿಐಗೆ ಪಿಎಫ್‌ಐಯಿಂದ ಹಣದ ವ್ಯವಸ್ಥೆ ಆಗ್ತಾ ಇದೆ. ಪ್ರವೀಣ್ ನೆಟ್ಟಾರ್ ಕೊಲೆ ಆರೋಪಿಗಳು ಒಂದು ವರ್ಷ ತಪ್ಪಿಸಿದ್ದರು. ಆದರೆ ಇವರನ್ನೆಲ್ಲಾ ಬಂಧಿಸಿರುವುದು ಪ್ರಕರಣವನ್ನು ಎನ್‌ಐಎಗೆ ವಹಿಸಿದ ಬಳಿಕವೇ. ಪ್ರಕರಣದ ದಾರಿ ತಪ್ಪಿಸುವ ಕೆಲಸವಾಗದೆ ಪಾರದರ್ಶಕ ತನಿಖೆ ನಡೆಯಬೇಕಾದರೆ ಈ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಆಗ್ರಹಿಸಿದರು.
ಸುಹಾಸ್ ಶೆಟ್ಟಿ ರೌಡಿಶೀಟರ್ ಅವನ ಮೇಲೂ ಕೊಲೆ ಆರೋಪ ಇದೆ ಎಂದ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಔಟ, ಕಾಂಗ್ರೆಸ್‌ನ ಶೇ.58 ಶಾಸಕರಿಗೆ ಕ್ರಿಮಿನಲ್ ಬ್ಯಾಗ್‌ಗ್ರೌಂಡ್ ಇದೆ. ಡಿಕೆಶಿ ಅವರ ಮೇಲೂ ಸಾಕಷ್ಟು ಕೇಸುಗಳಿವೆ, ಅವರನ್ನು ರೌಡಿಶೀಟರ್ ಎಂದು ಕರೆಯಬೇಕಾ? ಇಲ್ಲಿ ಕೊಲೆ ನಡೆದ ರೀತಿಯಲ್ಲಿ ನಮಗೆ ಅನುಮಾನ ಇದೆ. ಪಿಎಫ್‌ಐ ಬ್ಯಾನ್ ಆದ ಬಳಿಕ ಕೊಲೆ ನಡೆದಿದ್ದು, ಆ ಸಂಘಟನೆಯ ಆರೋಪಿಗಳಿದ್ದಾರೆ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಸಹಿತ ಹಲವರಿದ್ದರು.