ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಪೊಲೀಸರು ಕೂಡಾ ಆರೋಪಿಗಳೊಂದಿಗೆ ನೇರವಾಗಿ ಶಾಮೀಲಾಗಿದ್ದಾರೆ. ನನ್ನ ಕ್ಷೇತ್ರದಲ್ಲಿಯೇ ಈ ಕೊಲೆ ನಡೆದಿದ್ದು, ಒಬ್ಬ ಜನಪ್ರತಿನಿಧಿಯಾಗಿ ಹೇಳುವುದೇನೆಂದರೆ ನನಗೆ ಪೊಲೀಸ್ ತನಿಖೆಯಲ್ಲಿ ವಿಶ್ವಾಸವಿಲ್ಲ. ಈ ಪ್ರಕರಣವನ್ನು ಎನ್‌ಐಎ ಒಪ್ಪಿಸಬೇಕು ಎಂದು ಮೂಲ್ಕಿ ಮೂಡಬಿದ್ರೆ ಕ್ಷೇತ್ರ ಶಾಸಕ ಉಮಾನಾಥ್ ಕೋಟ್ಯಾನ್ ಆಗ್ರಹಿಸಿದ್ದಾರೆ.
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತಾಡಿದ ಅವರು, ಸುಹಾಸ್ ಹತ್ಯೆಯ ವಿಡಿಯೊದಲ್ಲಿ ನಾಲ್ಕು ಮಂದಿ ಕತ್ತಿಯಿಂದ ಕಡಿದ ಭೀಕರ ದೃಶ್ಯವಿದೆ. ಸುಹಾಸ್ ರಕ್ತದ ಮಡುವಲ್ಲಿ ಬಿದ್ದಿದ್ದು, ಅದಕ್ಕೆ 20ರಿಂದ 25 ಮಂದಿ ಬೇಲಿ ಕಟ್ಟಿದ ಹಾಗೆ ಆಟಕ್ಕೆ ಬಿಟ್ಟ ಹಾಗೆ ನೋಡಿದ್ದಾರೆ. ಅಲ್ಲದೆ ಆರೋಪಿಗಳಿಗೆ ಬೇಲಿ ನಿರ್ಮಿಸಿ ವ್ಯವಸ್ಥಿತ ರೀತಿಯಲ್ಲಿ ತಪ್ಪಿಸಲು ಅವಕಾಶ ಕೊಟ್ಟಿದ್ದಾರೆ. ಇದರಲ್ಲಿ ಮುಸಕು ಧಾರಿ ಮಹಿಳೆಯರೂ ಶಾಮೀಲಾಗಿದ್ದಾರೆ ಎಂದು ಕೋಟ್ಯಾನ್ ಆಗ್ರಹಿಸಿದರು.
ಸುಹಾಸ್‌ನಸದ್ದು ಮೊದಲೇ ವ್ಯವಸ್ಥಿತ ರೀತಿಯಲ್ಲಿ ಪೊಲೀಸ್ ಹಾಗೂ ಆರೋಪಿಗಳ ಮಧ್ಯೆ ಒಡಂಬಡಿಕೆಯಂತೆ ನಡೆದ ಕೊಲೆ. ಇದರಲ್ಲಿ ಪೊಲೀಸರು ನೇರವಾಗಿ ಶಾಮೀಲಾಗಿದ್ದಾರೆ. ಆರೋಪಿಗಳು ಸುಹಾಸ್ ಕಾರ್ ಕೊಟ್ಟ ಸರ್ವಿಸ್ ಸ್ಟೇಷನ್‌ಗೆ ಬಂದಿರುವುದು ಸಿಸಿಟವಿಯಲ್ಲಿ ರೆಕಾರ್ಡ್ ಆಗಿದೆ. ಪೊಲೀಸರು ಸುಹಾಸ್ ಆತ್ಮರಕ್ಷಣೆಗೆ ಇಟ್ಟ ಆಯುಧಗಳನ್ನು ತೆರವುಗೊಳಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಹಿಡಿದಿಲ್ಲ, ಬದಲಿಗೆ ವಹಿವಾಟಿನ ಪ್ರಕಾರ ಸರಂಡರ್ ಆಗಿದ್ದಾರೆ. ಪೊಲೀಸರು ಅವರ ಮೈ ಕೂಡಾ ಮುಟ್ಟಿಲ್ಲ ಎಂದು ಆರೋಪಿಸಿದರು.
ಇಲ್ಲಿ ಬರೀ ಐದು ಲಕ್ಷವಲ್ಲ, ದುಬೈಯಿಂದ ನಲ್ವತ್ತರಿಂದ ಐವತ್ತು ಲಕ್ಷ ಡೀಲಿಂಗ್ ನಡೆದಿದೆ. ಘಟನೆಯ ದಿನ ಪೊಲೀಸರು ಬಾರದೆ ಆರೋಪಿಗಳಿಗೆ ರಕ್ಚಣೆ ನೀಡಿದ್ದಾರೆ. ನಾನು ಆ ಕ್ಷೇತ್ರದ ಜನಪ್ರತಿನಿ ಆಗಿ ಹೇಳ್ತಾ ಇದ್ದೇನೆ ನನ್ನ ಸರ್ವಿಸ್‌ನಲ್ಲಿ ಇಂತಹಾ ಕಮೀಷನರನ್ನು ನಾನು ನೋಡಿಲ್ಲ. ಕಮೀಷರ್‌ನಿಂದ ಪಿಸಿವರೆಗೆ ಡೀಲಿಂಗ್ ನಡೆಯಿತಾ ಇದೆ. ಇಸ್ಪೀಟ್, ಸಿಂಗಲ್ ನಂಬರ್ ಎಲ್ಲಾ ರಾಜಾರೋಷವಾಗಿ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಡ್ಡಿದ್ರೇ ಏನೂ ಬೇಕಾದ್ರೂ ನಡೆಯುತ್ತದೆ. ನಮಗೆ ಪೊಲೀಸರ ಮೇಲೆ ನೂಲಿನಷ್ಟೂ ವಿಶ್ವಾಸ ಇಲ್ಲ. ಸ್ಪೀಕರ್ ಯು.ಟಿ. ಖಾದರ್ ಅವರು ಕೊಲೆ ತನಿಖೆ ನಡೆಯುವ ಮುಂಚೆಯೇ ಕ್ಲೀನ್‌ಚಿಟ್ ಕೊಟ್ಟಿದ್ದಾರೆ. ಸ್ಪೀಕರ್‌ಗಳಿಗೆ ಈ ರೀತಿ ಹೇಳಿಕೆ ಕೊಡುವ ಅಧಿಕಾರ ಇದೆಯಾ ಎಂದು ಪ್ರಶ್ನಿಸಿದ ಅವರು ಪ್ರಕರಣವನ್ನು ಎನ್‌ಐಎಗೆ ಒಪ್ಪಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಈಶ್ವರ್ ಕಟೀಲ್, ರಾಜೇಶ್, ವಸಂತ್, ಜಯಂತ್ ಕೋಟ್ಯಾನ್ ಮತ್ತಿತರರಿದ್ದರು.