ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆಯ ಹಿಂದೆ ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಇದ್ದು, ಈ ಬಗ್ಗೆ ಎನ್‌ಐಎ ತನಿಖೆ ನಡೆಸಬೇಕು. ಈ ಕೊಲೆಯಲ್ಲಿ ಬಜ್ಪೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರಶೀದ್ ಶಾಮೀಲಾಗಿದ್ದಾನೆ, ಇವನನ್ನು ಪೊಲೀಸರು ತನಿಖೆಗೊಳಪಡಿಸಬೇಕು ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಪ್ರಮುಖ್ ಕೆ.ಟಿ. ಉಲ್ಲಾಸ್ ಗಂಭೀರ ಆರೋಪ ಮಾಡಿದ್ದಾರೆ.
ಅವರು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಿಸಿ ಮಂಗಳೂರಿನ ಕದ್ರಿ ವಿಶ್ವಶ್ರೀ ಕಾರ್ಯಾಲಯದಲ್ಲಿ ಕರೆದ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಸುಹಾಸ್ ಹತ್ಯೆಗೆ ಸುಖಾನಂದ್ ಶೆಟ್ಟಿ ಹತ್ಯೆ ಆರೋಪಿ ಪಿಎಫ್‌ಐ ಕಾರ್ಯಕರ್ತನಾಗಿದ್ದ ನೌಷಾದ್ ಫಂಡಿಂಗ್ ಮಾಡಿದ್ದಾನೆ., ಪಿಎಫ್‌ಐ ಕಾರ್ಯಕರ್ತನಾಗಿದ್ದ ಕಿನ್ನಿಪದವಿನ ಇಸ್ಮಾಯಿಲ್ ಇಂಜಿನಿಯರ್ ಕೂಡಾ ಫಂಡಿಂಗ್ ಮಾಡಿದ್ದಾನೆ. ಈ ಹತ್ಯೆಗಾಗಿ ಕೋಟಿಗಟ್ಟಲೆ ಹಣ ಸಂಗ್ರಹ ಆಗಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಭಯೋತ್ಪಾದನೆ ಮಾಡಲು ಈ ಹಿಂದೆ ಪಿಎಫ್‌ಐಯಲ್ಲಿದ್ದ ಕಾರ್ಯಕರ್ತರು ಹಣ ಸಂಗ್ರಹ ಮಾಡುತ್ತಿದ್ದಾರೆ. ಫಂಡಿಂಗ್ ಟು ರೆರರಿಸಂ, ಟಾರ್ಗೆಟ್ ಕಿಲ್ಲಿಂಗ್ ಾನಂತರ ದೇಶದಲ್ಲಿ ಅರಾಜಕತೆ ಸೃಷ್ಟಿಸುವುದು ಅವರ ಮುಖ್ಯ ಉದ್ದೇಶ. ಇದೀಗ ಸುಹಾಸ್ ಶೆಟ್ಟಿ ಹತ್ಯೆಯಾಗಿದ್ದು, ಇದರಲ್ಲಿ ಪಿಎಫ್‌ಐ ಕಾರ್ಯಕರ್ತರು ಶಾಮೀಲಾಗಿರುವುದರಿಂದ ಇದರ ಎನ್‌ಐಎ ತನಿಖೆ ನಡೆಸುವುದು ಅನಿವಾರ್ಯವಾಗಿದೆ. ಈ ಕುರಿತಂತೆ ನಮ್ಮ ಪ್ರುಯತ್ನ ಮುಂದುವರಿದಿದೆ ಎಂದರು.
ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಬಜ್ಪೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಸ್ಟೇಬಲ್ ರಶೀದ್ ಇನ್ವಾಲ್‌ಮೆಂಟ್ ಇದೆ. ಈತ ಸುಹಾಸ್ ಶೆಟ್ಟಿಗೆ ಒಂದು ತಿಂಗಳಿನಿಂದ ಕರೆ ಮಾಡಿ ಹಿಂಸೆ ನೀಡುತ್ತಿದ್ದ ಎಂದು ತನ್ನ ಸ್ನೇಹಿತರು ಹಾಗೂ ಮನೆಯವವರಲ್ಲಿ ಮುಂಚೆಯೇ ಹೇಳಿದ್ದರು. ಮೊನ್ನೆ ತಾಯಿಯೂ ಇದನ್ನು ಹೇಳಿದರು ಎಂದು ಉಲ್ಲಾಸ್ ನುಡಿದರು. ಸುಹಾಸ್ ಹತ್ಯೆಯಾಗುವ ಮೂರು ದಿನಗಳ ಮುಂಚೆ ಎಸಿಪಿಯೋರ್ವರು ಸುಹಾಸ್ ಶೆಟ್ಟಿ ಕಾರಿನಲ್ಲಿದ್ದ ಟೂಲ್ಸ್, ವೆಪನ್ಸ್‌ಗಳನ್ನು ತೆಗೆದಿರಿದ್ದಾನೆ. ಒಂದು ವೇಳೆ ತೆಗೆಯದಿದ್ದರೆ ಕೇಸ್ ಹಾಕ್ತೀವಿ ಎಂದು ಬೆದರಿಸಿದ್ದಾರೆ. ಹೀಗೆ ಟೂಲ್ಸ್‌ಗಳನ್ನು ಉದ್ದೇಶಪೂರ್ವಕವಾಗಿ ತೆಗೆದು ಬಲಿಕೊಡಲಾಗಿದೆ. ಈ ಟೂಲ್ಸ್‌ಗಳನ್ನು ಸುಹಾಸ್ ಕಾರಿನಿಂದ ತೆಗೆದಿರಿಸಿರುವುದನ್ನು ಆರೋಪಿಗಳ ಬಳಿ ಹೇಳಿದ್ದು ಯಾರು? ಈ ಕೆಲಸ ರಶೀದ್ ಮೂಲಕವೇ ಆಗಿದೆ. ರಶೀದ್‌ನನ್ನು ತನಿಖೆಗೊಳಪಡಿಸಿದರೆ ಇದರ ಹಿಂದೆ ಯಾರಿದ್ದಾರೆ ಎಂಬ ಮಾಹಿತಿ ಸಿಗುತ್ತದೆ. ಆತನನ್ನು ಪೊಲೀಸರು ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದರು.
ಕಳಸದ ರಂಜಿತ್ ಹಾಗೂ ನಾಗರಾಜ್‌ನನ್ನು ವಿನಾಕಾರಣ ಫಿಕ್ಸ್ ಮಾಡಿದ್ದಾರೆ. ಬಹುಶಃ ಇವರಿಗೆ ಸುಹಾಸ್ ಯಾರೆಂದೇ ಗೊತ್ತಿರಲಿಕ್ಕಿಲ್ಲ. ಅವರಿಗೆ ಸುಹಾಸ್ ಯಾವುದೇ ದ್ವೇಷ ಕೂಡಾ ಇಲ್ಲ. ನಮ್ಮದೇ ಒಂದು ವಿಚಾರಣೆಯಲ್ಲಿ ಇವರಿಬ್ಬರು ಯಾವುದೇ ಅಪರಾಧಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎನ್ನುವುದನ್ನು ಕಂಡುಕೊಂಡಿದ್ದೇವೆ. ಯಾವುದೋ ಒಂದು ಕಾರಣವನ್ನು ಹೇಳಿ, ಈ ಕೇಸಿನಲ್ಲಿ ಇಬ್ಬರು ಹಿಂದೂಗಳಿರಬೇಕೆಂದು ಇವರನ್ನು ಉದ್ದೇಶಪೂರ್ವಕವಾಗಿ ಇವರನ್ನು ಸಿಲುಕಿಸಿರುವ ಅನುಮಾನ ಇದೆ. ಪಿಎಫ್‌ಐ ಕಾರ್ಯಕರ್ತರು ಈಗಲೂ ಸಕ್ರಿಯರಾಗಿದ್ದು, ಟಾರ್ಗೆಟ್ ಕಿಲ್ಲಿಂಗ್‌ಗಾ ಹಣ ಸಂಗ್ರಹ ಮಾಡುತ್ತಿದ್ದಾರೆ. ಈ ಹಣದಲ್ಲಿ ಹಿಂದೂಗಳನ್ನು ಸಹ ಬಳಸಿ ಟಾರ್ಗೆಟ್ ಕಿಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಜ್ಪೆಯಲ್ಲಿ ಸುಹಾಸ್ ಕೊಲೆ ನಡೆದಾಗ ಆರೋಪಿಗಳು ಆರಾಮವಾಗಿ ತಪ್ಪಿಸಿಕೊಂಡು ಹೋಗಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಇವರಿಗೆ ತಪ್ಪಿಸಿಕೊಳ್ಳಲು ಬುರ್ಕಾಧಾರಿ ಹೆಂಗಸರು ಸಹಾಯ ಮಾಡಿದ್ದಾರೆ. ಇವರಿಗೆ ಸ್ಥಳೀಯರು ಸಹಾಯ ಮಾಡಿರುವುದರಿಂದ ಹೀಗೆ ಆರಾಮವಾಗಿ ಕೃತ್ಯ ನಡೆಸಲು ಸಾಧ್ಯವಾಗಿದೆ.
ಆರಾಮವಾಗಿ ಹೋಗಿರುವುದು ರೆಕಾರ್ಡ್ ಆಗಿದೆ. ಹೆಂಗಸರೂ ಸಹಾಯ ಮಾಡುತ್ತಾರೆ. ಇಬ್ಬರು ಬುರ್ಕಾಧಾರಿ ಆರಾಮವಾಗಿ ಎಸ್ಕೇಪ್ ಆಗಲು ಸಹಾಯ ಮಾಡಿದ್ದಾರೆ. ಕಾನ್ಫಿಡೆನ್ಸ್ ಆಗಿ ಮಾಡಿದ್ದಾರೆ. ಪ್ರಶಾಂತ್ ಕೊಲೆ ಆರೋಪಿ, ಪಿಎಫ್‌ಐ ಕಾರ್ಯಕರ್ತ ಮುಸ್ತಫಾ ಹಾಗೂ ಕಬೀರ್ ಕೂಡಾ ಅಲ್ಲಿಯೇ ಇದ್ದು ಆರೋಪಿಗಳಿಗೆ ತಪ್ಪಿಸಿಕೊಳ್ಳಲು ನೆರವಾಗಿದ್ದಾರೆ ಎಂದರು.
ಆದ್ದರಿಂದ ಸುಹಾಸ್ ಶೆಟ್ಟಿ ಹತ್ಯೆಯನ್ನು ಎನ್‌ಐಎ ಮುಖಾಂತರವೇ ನಡೆಸಿದರೆ ಇದರ ಹಿಂದಿನ ಮಾಹಿತಿಗಳು ಹೊರಬರುತ್ತಿದೆ. ರಾಜ್ಯ ಗೃಹಸಚಿವರು ಪ್ರಕರಣದ ತನಿಖೆ ನಡೆಸಲು ರಾಜ್ಯ ಪೊಲೀಸ್ ಇಲಾಖೆ ಸಕ್ಷಮವಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಯ ಮೇಲೆ ನಮಗೂ ಭರವಸೆ ಇದೆ. ಆದರೆ ಇಲ್ಲಿನ ರಾಜಕಾರಣಿಗಳ ಮೇಲೆ ನಮಗೆ ಭರವಸೆ ಇಲ್ಲ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಒಡೆದಾಗ ಭಯೋತ್ಪಾದಕರನ್ನು ನನ್ನ ಬ್ರದರ್ಸ್ ಎಂದು ಕರೆಯುವವರಿರುವಾಗ ಈ ಕೇಸನ್ನು ಎನ್‌ಐಎ ಮುಖಾಂತರವೇ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಮುಖಂಡ ಶರಣ್ ಪಂಪ್‌ವೆಲ್, ಎಚ್.ಕೆ.ಪುರುಷೋತ್ತಮ್, ರವಿ ಅಸೈಗೋಳಿ, ಲಿಖಿತ್ ಮೂಡುಶೆಡ್ಢೆ ಇದ್ದರು.