ಇಸ್ಲಾಂ ಅವಹೇಳನಗೈದ ಪುತ್ತಿಲ ಗಡೀಪಾರು ಮಾಡಿ: ಎಸ್‌ಡಿಪಿಐ ಪೊಲೀಸಿಗೆ ದೂರು

ಪುತ್ತೂರು: ಇಸ್ಲಾಂ ಅವಹೇಳನಗೈಯ್ಯುತ್ತಿರುವ ಸಂಘಪರಿವಾರದ ನಾಯಕ ಅರುಣ್ ಕುಮಾರ್ ಪುತ್ತಿಲರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡು, ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಅಶ್ರಫ್ ಬಾವು‌ ಎಂಬವರು ಪುತ್ತೂರು ಠಾಣೆಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?

ಎ.24ರ ಸಂಜೆ ಸುಮಾರು 6 ಗಂಟೆಗೆ ಬಿಜೆಪಿ ಪಕ್ಷದ ವತಿಯಿಂದ ಪುತ್ತೂರು ಬಸ್ ನಿಲ್ದಾಣದ ಗಾಂಧಿಕಟ್ಟೆಯ ಸಮೀಪ, ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭಯೋತ್ಪಾದನಾ ಕೃತ್ಯದ ವಿರುದ್ಧದ ಪ್ರತಿಭಟನೆಯಲ್ಲಿ, ರೌಡಿಶೀಟರ್ ಅರುಣ್ ಕುಮಾರ್ ಪುತ್ತಿಲ ಸಾರ್ವಜನಿಕ ಭಾಷಣ ಮಾಡಿದ್ದಾರೆ. ಈ ವೇಳೆ ಆತ ಮುಸ್ಲಿಮರನ್ನು ಹಿಯಾಳಿಸುತ್ತಾ ‘ಇಸ್ಲಾಂ ಧರ್ಮ ಇರುವವರಿಗೆ ಭಯೋತ್ಪಾದನೆ ನಿಲ್ಲುವುದಿಲ್ಲ ಎಂದು, ಇತ್ತೀಚೆಗೆ ನಡೆದ ಕಣ್ಣೂರಿನ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧದ ಪ್ರತಿಭಟನೆಯನ್ನು ಉಲ್ಲೇಖಿಸಿ, ಮಂಗಳೂರಿನಲ್ಲಿ ಭಯೋತ್ಪಾದನಾ ಕೃತ್ಯ ನಡೆಸಿದ್ದಾರೆ. ಮುಸ್ಲಿಮರೇ ಭಯೋತ್ಪಾದನಾ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಭಯೋತ್ಪಾದನೆ ನಡೆಸಿದವರೆಲ್ಲಾ ಮುಸಲ್ಮಾನರು’ ಎಂದು ಮುಸ್ಲಿಮರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಹಿಂದುಗಳ ಹಾಗೂ ಇನ್ನಿತರ ಧರ್ಮದವರಲ್ಲಿ ಬಹಿಷ್ಕಾರದ ಭಾವನೆ ಮೂಡುವಂತೆ ಮಾಡುತ್ತಾ ಇಸ್ಲಾಂ ಧರ್ಮವನ್ನು ಭಯೋತ್ಪಾದನಾ ಧರ್ಮವನ್ನಾಗಿ ಉಲ್ಲೇಖಿಸುತ್ತಾ ಕೋಮು ಭಾವನೆ ಕೆರಳಿಸುತ್ತಾ ಜೈಶ್ರೀರಾಂ ಘೋಷಣೆ ಕೂಗುತ್ತಾ ಹಿಂದುತ್ವವಾದದ ಮೂಲಕ ವಿಷ ಭೀಜ ಬಿತ್ತುತ್ತಾ ಸಾಮಾನ್ಯ ಜನರ ಮನಸ್ಸಿಗೆ ಇಸ್ಲಾಂ ಧರ್ಮದ ಬಗ್ಗೆ ಕೀಳು ಮಟ್ಟದ ಭಾವನೆ ಮೂಡುವಂತೆ ಮಾಡಿದ್ದಾರೆ.
ಅಲ್ಲದೆ ಅವರೊಂದಿಗೆ ಪ್ರತಿಭಟನೆಯ ಸಂಘಟಕರು ಬೆಂಬಲ ನೀಡಿದಲ್ಲದೆ ಪ್ರೇರಣೆ ಮಾಡಿರುತ್ತಾರೆ. ಆದ್ದರಿಂದ ಆರೋಪಿ ವಿರುದ್ಧ ಹಾಗೂ ಈ ಸಭೆಯ ಆಯೋಜಕರ ವಿರುದ್ಧ ಕಾನೂನು ಬಾಹಿರ ಸಭೆ ಸಾರ್ವಜನಿಕ ಸಂಚಾರಕ್ಕೆ ತಡೆ ಮಾಡಿ ರಸ್ತೆ ತಡೆ ಹಾಗೂ ಒಂದು ಧರ್ಮವನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟಿ ಕೋಮು ಭಾವನೆ ಕೆರಳಿಸಿ ಕೋಮು ಗಲಭೆಗೆ ಯತ್ನಿಸಿದ್ದಾರೆ. ಆದ್ದರಿಂದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಒಂದನೇ ಆರೋಪಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ದೂರಿನಲ್ಲಿ ಅಶ್ರಫ್ ಬಾವು‌ ಆಗ್ರಹಿಸಿದ್ದಾರೆ.

error: Content is protected !!