ಕ್ರೈಸ್ತರ ಧಾರ್ಮಿಕ ಭಾವನೆಗೆ ಧಕ್ಕೆ: ರ‍್ಯಾಪರ್ ಬಾದ್‌‌ ಶಾ ವಿರುದ್ಧ ಆಕ್ರೋಶ!

ಪಂಜಾಬ್: ಗಾಯಕ ಮತ್ತು ರ‍್ಯಾಪರ್ ಬಾದ್‌‌ ಶಾ ವಿರುದ್ಧ ಪಂಜಾಬ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಬಾದ್‌ಶಾ ಕ್ರಿಶ್ಚಿಯನ್ ಧಾರ್ಮಿಕ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವಾಸ್ತವವಾಗಿ ಇತ್ತೀಚೆಗೆ ಬಾದ್‌ಶಾ ಅವರ ‘ವೆಲ್ವೆಟ್ ಫ್ಲೋ’ ಹೆಸರಿನ ಹಾಡೊಂದು ಬಿಡುಗಡೆಯಾಯಿತು. ಇದರಲ್ಲಿ ಚರ್ಚ್ ಮತ್ತು ಬೈಬಲ್ ನಂತಹ ಪದಗಳನ್ನು ತಪ್ಪು ಸಂದರ್ಭದಲ್ಲಿ ಬಳಸಲಾಗಿದೆ. ಹೀಗಾಗಿ ಬಾದ್‌ಶಾ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ಗ್ಲೋಬಲ್ ಕ್ರಿಶ್ಚಿಯನ್ ಆಕ್ಷನ್ ಕಮಿಟಿ ಇತ್ತೀಚೆಗೆ ಗುರುದಾಸ್ಪುರ್ ಬಳಿಯ ಬಟಾಲಾ ಜಿಲ್ಲೆಯ ಕಿಲಾ ಲಾಲ್ ಸಿಂಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಬಳಿಕ ಪೊಲೀಸರು ಕ್ರಮ ಕೈಗೊಂಡು ಗಾಯಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಗ್ಲೋಬಲ್ ಕ್ರಿಶ್ಚಿಯನ್ ಆಕ್ಷನ್ ಕಮಿಟಿಯ ರಾಷ್ಟ್ರೀಯ ಅಧ್ಯಕ್ಷ ಜತಿಂದರ್ ಮಸಿಹ್ ಮಾತನಾಡಿ, ವೆಲ್ವೆಟ್ ಫ್ಲೋ ಹಾಡಿನಲ್ಲಿ ರ‍್ಯಾಪರ್ ಬಾದ್‌ಶಾ ಬೈಬಲ್ ಮತ್ತು ಚರ್ಚ್‌ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದರು. ಈ ಹಾಡು ಕ್ರಿಶ್ಚಿಯನ್ ಸಮುದಾಯದ ಜನರ ಭಾವನೆಗಳಿಗೆ ನೋವುಂಟು ಮಾಡಿದೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.

error: Content is protected !!