ಮಂಗಳೂರು: ಬಸ್‌ನಲ್ಲಿ ಮಲಗಿದ್ದ ಹುಡುಗಿಯ ಖಾಸಗಿ ಅಂಗವನ್ನು ಸ್ಪರ್ಷಿಸುತ್ತಾ ವಿಕೃತ ಆನಂದ ಅನುಭವಿಸುತ್ತಿದ್ದ ಪೋಲಿ ಕಂಡಕ್ಟರ್ ಓರ್ವನ ವಿಡಿಯೋ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋಗೆ ಸಂಬಂಧಿಸಿ ಬಸ್‌ನ ಹೆಸರು, ಅದರ ರೂಟ್ ವಿವರವಿದ್ದು, ಈತನನ್ನು ಪೊಲೀಸರು ಬಂಧಿಸುವಂತೆ ಆಗ್ರಹಿಸಲಾಗಿದೆ.
ವಿಡಿಯೋದಲ್ಲಿರುವ ಮಾಹಿತಿಯ ಪ್ರಕಾರ ಬಸ್ ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಸೇರಿದ್ದು, ಅದರ ನಂಬರ್ ಉಳ್ಳಾಲ 44 A 51 ನಂಬರ್‌ನ ಬಸ್ ಆಗಿದ್ದು, ಮಂಗಳೂರಿನ ನಗರದಿಂದ ಉಳ್ಳಾಲಕ್ಕೆ ಸಂಚರಿಸುವ ಬಸ್ ಆಗಿದೆ.
ಈ ಬಸ್‌ನಲ್ಲಿ ಬಹುತೇಕ ಹುಡುಗಿಯೇ ಇದ್ದು, ಒಂದು ಸೀಟಿನಲ್ಲಿ ಇಬ್ಬರು ಹುಡುಗಿಯರು ಕೂತಿದ್ದರು. ಕಂಡಕ್ಟರ್ ಸೈಡಿನ ಸೀಟಿನಲ್ಲಿ ಕುಳಿತಿದ್ದ ಹುಡುಗಿ ನಿದ್ದೆಯಿಂದ ತೂಕಡಿಸುತ್ತಿದ್ದು, ಪಕ್ಕದಲ್ಲೇ ನಿಂತಿರುವ ಪೋಲಿ ಕಂಡಕ್ಟರ್ ಆಕೆಯ ಎದೆ ಭಾಗವನ್ನು ಸ್ಪರ್ಷಿಸುತ್ತಾ ವಿಕೃತ ಆನಂದವನ್ನು ಪಡೆಯುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಈ ವಿಡಿಯೋವನ್ನು ಬಸ್‌ನ ಮತ್ತೊಂದು ಸೀಟಿನಲ್ಲಿ ಕುಳಿತಿರುವ ಹುಡುಗಿಯರು ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿ, “Ullal 44.A 51 mudipu government root bus ನಲ್ಲಿ ಕಂಡಕ್ಟರ್ ಆಗಿರುತ್ತಾನೆ…. ಇವನ ಬಗ್ಗೆ ಹೆಣ್ಣು ಮಕ್ಕಳು ಜಾಗರೂಕರಾಗಿರಿ…. . ಮಂಗಳೂರಿನ ಪೋಲೀಸ್ ಇಲಾಖೆಗೆ ತಲುಪಿಸಿ..” ಎಂದು ಬರೆದಿದ್ದಾರೆ ಎನ್ನಲಾಗುತ್ತಿದೆ.
ಸದ್ಯಕ್ಕೆ ಪೋಲಿ ಕಂಡಕ್ಟರ್‌ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೋಲಿ ಕಂಡಕ್ಟರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.