ಪಹಲ್ಗಾಂ: ಪಹಲ್ಗಾಂನಲ್ಲಿ ಉಗ್ರರು ನಡೆಸಿದ ಭೀಕರ ನರಮೇಧ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಇದಕ್ಕೆ ತಕ್ಕ ಪ್ರತೀಕಾರ ತೀರಿಸಲೇಬೇಕೆಂದು ಸಮಸ್ತ ಭಾರತೀಯರು ಮಾತ್ರವಲ್ಲ, ಮಿತ್ರ ರಾಷ್ಟ್ರಗಳೂ ಕೂಡಾ ಭಾರತವನ್ನು ಆಗ್ರಹಿಸಿದೆ. ಇಂತಹ ಆಕ್ರೋಶದ ಮಧ್ಯೆ ಅಲ್ಲಿನ ಸ್ಥಳೀಯ ನಿವಾಸಿಗಳ ಮಾನವೀಯ ಮುಖಗಳು ಸೋಷಿಯಲ್ ಮೀಡಿಯಾದ ಮೂಲಕ ಪರಿಚಯವಾಗುತ್ತಿದೆ.
ಕರ್ನಾಟಕದ ಶಿವಮೊಗ್ಗದಿಂದ ಹೆಂಡತಿ ಹಾಗೂ ಮಗನ ಜೊತೆಗೆ ಕಾಶ್ಮೀರಕ್ಕೆ ಜಾಲಿ ಟ್ರಿಪ್ ಹೋಗಿದ್ದ ಮಂಜುನಾಥ್ ಅವರು ದುರಂತ ಅಂತ್ಯ ಕಂಡಿದ್ದಾರೆ. ಆದರೆ ಭಯೋತ್ಪಾದಕರ ಗುಂಡಿನ ದಾಳಿ ವೇಳೆ ಶಿವಮೊಗ್ಗದ ಮೃತ ಮಂಜುನಾಥ್ ಅವರ ಪುತ್ರ ಅಭಿಜಯ್ನ್ನು ಸ್ಥಳೀಯ ಕಾಶ್ಮೀರಿಗರು ರಕ್ಷಿಸಿದ್ದ ರೋಚಕ ವಿಡಿಯೋ ವೈರಲ್ ಆಗಿದೆ.
ಉಗ್ರರ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಬಂದಿದ್ದ ಅಭಿಜಯ್ನನ್ನ ಸ್ಥಳೀಯ ವ್ಯಕ್ತಿಯೊಬ್ಬ ತನ್ನ ಬೆನ್ನ ಮೇಲೆ ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ಕರೆತರುತ್ತಿರುವದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ವಿಡಿಯೋ ಲಿಂಕ್ ಇಲ್ಲಿದೆ