ಮಂಗಳೂರಿನಲ್ಲಿ ಎ.26ರಂದು ಅರೋಮಾ 2025: ಇಲ್ಲಿ ಎಲ್ಲವೂ ಇದೆ!

ಮಂಗಳೂರು: ಮಂಗಳೂರಿನಲ್ಲಿ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ ಸರ್ವೀಸಸ್ ನೇತೃತ್ವದಲ್ಲಿ ಏಪ್ರಿಲ್ 26 ರಂದು ಮಂಗಳೂರಿನ ಬಹುನಿರೀಕ್ಷಿತ ʻಅರೋಮಾ 2025ʼ ನಡೆಯಲ್ಲಿದ್ದು, ಇದರಲ್ಲಿ ಆಹಾರ ಮೇಳ ಸಹಿತ ಹಲವು ಪ್ರದರ್ಶನಗಳು, ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.


ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತಾಡಿದ ಅವರು, ನಿಟ್ಟೆ (ಡೀಮ್ಡ್ ಎಂದು ಪರಿಗಣಿಸಲಾದ ವಿಶ್ವವಿದ್ಯಾಲಯ) ದೊಂದಿಗೆ ಸಂಯೋಜಿತವಾಗಿರುವ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ ಸರ್ವೀಸಸ್ (NIHS), ಏಪ್ರಿಲ್ 26, 2025 ರ ಶನಿವಾರ NIHS ಕ್ಯಾಂಪಸ್‌ನಲ್ಲಿ ತನ್ನ ವಿಶಿಷ್ಟ ವಾರ್ಷಿಕ ಕಾರ್ಯಕ್ರಮವಾದ ಅರೋಮಾ 2025 ಅನ್ನು ಆಯೋಜಿಸಲು ಸಜ್ಜಾಗಿದೆ ಎಂದರು.

ಈ ಕಾರ್ಯಕ್ರಮವನ್ನು ತಾಜ್ ವಿವಾಂತದ ಮಂಗಳೂರಿನ ಜನರಲ್ ಮ್ಯಾನೇಜರ್ ಸಿಜು ನಂಬಿಯಾರ್ ಉದ್ಘಾಟಿಸಲಿದ್ದಾರೆ. ಲಲಿತ್ ಬೇಕಲ್ ರೆಸಾರ್ಟ್‌ನ ಎಲ್ & ಡಿ ವ್ಯವಸ್ಥಾಪಕ ಹುಸೇನ್ ಮತ್ತು ಕಣ್ಣೂರು ವಾರ್ಡ್‌ನ ಕಾರ್ಪೊರೇಟರ್ ಚಂದ್ರಾವತಿ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅರೋಮಾ 2025 ವಿದ್ಯಾರ್ಥಿಗಳ ನಿರ್ವಹಣಾ ಕೌಶಲ್ಯ ವೃದ್ಧಿ ಮತ್ತು ಉದ್ಯಮಶೀಲತೆಯ ಭವ್ಯ ಪ್ರದರ್ಶನ ಮುಖ್ಯ ಉದ್ದೇಶ ಎಂದರು.

ಅರೋಮಾ 2025 ರಲ್ಲಿ 15ಕ್ಕೂ ಹೆಚ್ಚು ಆಹಾರ ಮಳಿಗೆಗಳು, ಶಾಪಿಂಗ್ ಮಳಿಗೆಗಳು. ಮಾಂಡೋವಿ ಮೋಟಾರ್ಸ್‌ನಿಂದ ಕಾರು ಪ್ರದರ್ಶನ ಮತ್ತು ಬುಕಿಂಗ್‌ಗಳು ನಡೆಯಲಿದೆ. ಬ್ಯಾಂಡ್ ರಿದಮ್ ಮೇಟ್ಸ್, ಸಾಂಸ್ಕೃತಿಕ ಪ್ರದರ್ಶನಗಳು, ನ್ಯೂ ಓಷನ್ ಕಿಡ್ಸ್ ಮತ್ತು NIHS ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಇರಲಿದೆ. ವಿಶೇಷ ಆಕರ್ಷಣೆಯಾಗಿ 20ಕ್ಕೂ ಹೆಚಚ್ಚು ಬಾರ್ಟೆಂಡರ್‌ಗಳಿಂದ (ಎಲ್ಲಾ NIHS ವಿದ್ಯಾರ್ಥಿಗಳು) ಫ್ಲೇರ್ ಶೋ ನಡೆಯಲಿದೆ. ಇದರಲ್ಲಿ ಅತಿಥಿ ವೃತ್ತಿಪರರು ಮತ್ತು ಹಳೆಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸಲು ಸಹಾಯ ಒದಗಿಸಲಾಗುತ್ತದೆ ಎಂದರು.

AROMA ಕೇವಲ ಆಹಾರ ಉತ್ಸವವಲ್ಲ – ಇದು ನಮ್ಮ ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ನೈಜ ಜಗತ್ತಿನ ನೆಲೆಯಲ್ಲಿ ಅನ್ವಯಿಸಲು ಒಂದು ವೇದಿಕೆಯಾಗಿದೆ, ಆತಿಥ್ಯ, ನಿರ್ವಹಣೆ ಮತ್ತು ಸೃಜನಶೀಲತೆಯನ್ನು ಸಂಯೋಜಿಸುತ್ತದೆ. ಇದು ಸಮುದಾಯ ಮತ್ತು ಉದ್ಯಮದೊಂದಿಗೆ ತಮ್ಮ ಸಂಬಂಧವನ್ನು ಬಲಪಡಿಸುತ್ತದೆ. ಈ ಕಾರ್ಯಕ್ರಮವು NIHSನ ಕ್ರಿಯಾತ್ಮಕ, ವೃತ್ತಿಪರ ಮತ್ತು ವಿದ್ಯಾರ್ಥಿಗಳ ಲೀಡರ್‌ಶಿಪ್ ಮನೋಭಾವ‌ ಹೆಚ್ಚಿಸುತ್ತದೆ. ಇದು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಉದ್ಯಮದೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಕಲ್ಪಿಸುತ್ತದೆ ಎಂದರು.

AROMA 1995 ರಲ್ಲಿ ಸ್ಥಾಪನೆಯಾದ ಮಂಗಳೂರಿನ ಅತ್ಯಂತ ಹಳೆಯ ಆಹಾರ ಉತ್ಸವಗಳಲ್ಲಿ ಒಂದಾಗಿದೆ. ಈ ಕಾರ್ಯಕ್ರಮಕ್ಕಾಗಿ ಟಿಕೆಟ್‌ಗಳು NIHS ಕ್ಯಾಂಪಸ್‌ನಲ್ಲಿ ಲಭ್ಯವಿದೆ ಮತ್ತು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳು ಮತ್ತು ಪ್ರಾಯೋಜಕರಿಗೆ ಸ್ಟಾಲ್ ಬುಕಿಂಗ್‌ ಸೌಲಭ್ಯ ಲಭ್ಯವಿದೆ. ಇದು ಸ್ಥಳೀಯರಿಗೆ ಕೂಡಾ ಮುಕ್ತವಾಗಿದೆ. ಟಿಕೆಟ್‌ಗಳು ಮತ್ತು ಭಾಗವಹಿಸಲು +91 76765 54656/89719 56352 ಅನ್ನು ಸಂಪರ್ಕಿಸಬಹುದು ಎಂದರು.

ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ ಸರ್ವೀಸಸ್ ಇದು ಹೋಟೆಲ್ ಮ್ಯಾನೇಜ್‌ಮೆಂಟ್, ಆತಿಥ್ಯ, ಪ್ರವಾಸೋದ್ಯಮ ಮತ್ತು ವಾಯುಯಾನ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆಯಾಗಿದೆ. ಇದು ನಿಟ್ಟೆ (ಡೀಮ್ಡ್ ಎಂದು ಪರಿಗಣಿಸಲಾದ ವಿಶ್ವವಿದ್ಯಾಲಯ) ದ ಒಂದು ಘಟಕವಾಗಿದೆ ಮತ್ತು ಕಲಿಕೆಗೆ ಪ್ರಾಯೋಗಿಕ ವಿಧಾನ, ಉದ್ಯಮ-ಆಧಾರಿತ ಪಠ್ಯಕ್ರಮವನ್ನು ಒಳಗೊಂಡಿದೆ ಎಂದು ಆಯೋಜಕರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ NIHS ಪ್ರಾಂಶುಪಾಲ ಡಾ. ಧೀರಜ್ ಪಾಠಕ್, ಈವೆಂಟ್‌ ಸಂಯೋಜಕ, ಶ್ರೀ ಡೊನಾಲ್ಡ್ ಡಿಸೋಜಾ, ಡಾ. ನಿರುಪಮಾ, ವಿದ್ಯಾರ್ಥಿ ಸಂಯೋಜನ ಲ್ಯಾನ್ ಡಿಸೋಜಾ, ವಿದ್ಯಾರ್ಥಿ ಪ್ರತಿನಿಧಿಗಳಾದ ಹೆನ್ಸಾಲ್ ಲಸ್ರಾದೊ ಗೌತಮ್ ಆಚಾರ್ಯ ಉಪಸ್ಥಿತರಿದ್ದರು.

error: Content is protected !!