ರಿಕ್ಕಿ ರೈ ಮೇಲೆ ಶೂಟೌಟ್:‌ ಆರೋಪಿಗಾಗಿ ಶೋಧ ಕಾರ್ಯ

ಬೆಂಗಳೂರು: 2 ದಿನದ ಹಿಂದಷ್ಟೇ ರಷ್ಯಾದಿಂದ ವಾಪಸ್ ಆಗಿದ್ದ ಡಾನ್‌ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ರಿಯಲ್ ಎಸ್ಟೇಟ್ ಬಿಸಿನೆಸ್​​​ನಲ್ಲಿ  ತೊಡಗಿದ್ದು ನಿನ್ನೆ ಮಧ್ಯರಾತ್ರಿ ಬಿಡದಿಯ ತಮ್ಮ ಮನೆಯಿಂದ ಫಾರ್ಚ್ಯೂನರ್​ ಕಾರಲ್ಲಿ ಬೆಂಗಳೂರಿಗೆ ಹೊರಟಿದ್ದರು. ಮನೆಯಿಂದ ಹೊರಗೆ ಬರುತ್ತಿದ್ದಂತೆ ಗೇಟ್​​ ಬಳಿ ದುಷ್ಕರ್ಮಿಯೊಬ್ಬ ಎರಡು ಸುತ್ತಿನ ಫೈರಿಂಗ್​ ಮಾಡಿ ಪರಾರಿಯಾಗಿದ್ದಾನೆ. ಪೊಲೀಸರಿಗೆ ಆತನ ಸುಳಿವು ಲಭಿಸಿದೆ ಎನ್ನಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.

KA 53 MC 7128 ನಂಬರ್​​​ ನ ಫಾರ್ಚುನರ್‌ ಕಾರಲ್ಲಿ ಮೂವರು ತೆರಳುತ್ತಿದ್ದರು. ರಿಕ್ಕಿ ರೈ ಜತೆಗೆ ಗನ್​ ಮ್ಯಾನ್ ಇದ್ದು, ಚಾಲಕ ಕಾರು ಚಲಾಯಿಸ್ತಿದ್ದ. ಹಿಂಬದಿ ಸೀಟ್​ನಲ್ಲಿ ರಿಕ್ಕಿ ರೈ ಕುಳಿತಿದ್ದರು. ಪೊಲೀಸರ ಮಾಹಿತಿ ಪ್ರಕಾರ 70mm ಬುಲೆಟ್​ನ ಶಾಟ್​ಗನ್​ ಬಳಸಿ ಫೈರಿಂಗ್ ನಡೆಸಲಾಗಿದೆ. ಒಂದು ಬಾರಿ ಮಾತ್ರ ಗುಂಡು ಹಾರಿಸಿದ್ದು, ಕಾರಿನ ಡೋರ್​ ಸೀಳಿ ಬಂದ ಬುಲೆಟ್, ಡ್ರೈವರ್ ಸೀಟ್ ಕುಶನ್ ಒಳಗೆ ನುಗ್ಗಿದೆ. ನಂತರ ಕಾರಿನ ಹಿಂಬದಿ ಸೀಟ್​ನ ಎಡಭಾಗದ ಡೋರ್​ಗೆ ತಾಗಿದೆ. ಈ ವೇಳೆ ಡ್ರೈವರ್ ಬೆನ್ನಿಗೆ ಹಾಗೂ ರಿಕ್ಕಿ ರೈ ಮೂಗು ಹಾಗೂ ಕೈಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

error: Content is protected !!