ಮಂಗಳೂರು: ಪಶ್ಚಿಮ ಬಂಗಾಳ ಮೂಲದ ಯುವತಿಯ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣದ ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದಿದ್ದಾರೆ. ಆರೋಪಿಗಳನ್ನು ಆಟೋ ರಿಕ್ಷಾ ಚಾಲಕ ಮುಲ್ಕಿ ಲಿಂಗಪ್ಪಯ್ಯಕಾಡು ನಿವಾಸಿ ಪ್ರಭುರಾಜ್ (38), ಪೈಂಟರ್ ಕಮ್ ಎಲೆಕ್ಟ್ರೀಷಿಯನ್ ಕೆಲಸದ ಕುಂಪಲ, ಚಿತ್ರಾಂಜಲಿ ನಗರ ನಿವಾಸಿ ಮಿಥುನ್ (37), ಡೆಲಿವರಿ ಬಾಯ್ ಆಗಿರುವ ಪಡೀಲ್ ಕೊಡಕ್ಕಲ್ ನಿವಾಸಿ ಮನೀಶ್ (30) ಎಂದು ಹೆಸರಿಸಲಾಗಿದೆ.
ಕೇರಳದ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ನಗರಕ್ಕೆ ಸ್ನೇಹಿತನ ಜೊತೆ ಬಂದಿದ್ದು ಅಲ್ಲಿ ಆತನ ಜೊತೆ ಜಗಳ ಮಾಡಿಕೊಂಡು ಪ್ರಭುರಾಜ್ ರಿಕ್ಷಾ ಹತ್ತಿದ್ದಳು. ಕಾಮುಕ ಪ್ರಭುರಾಜ್ ಆಕೆಯ ಸ್ನೇಹ ಸಂಪಾದಿಸಿದ್ದು ತನಗೆ ಪರಿಚಯದ ರೊಟ್ಟಿ ಕಂಪನಿಯೊಂದರಲ್ಲಿ ಕೆಲಸ ಕೊಡಿಸುವ ಆಮಿಷ ಒಡ್ಡಿ ತನ್ನ ಸ್ನೇಹಿತರ ಜೊತೆ ಸೇರಿ ಉಳ್ಳಾಲ ಠಾಣಾ ವ್ಯಾಪ್ತಿಯ ಮುನ್ನೂರು ನದಿಯ ತೀರಕ್ಕೆ ಕರೆದೊಯ್ದು ಮದ್ಯಪಾನ ಮಾಡಿಸಿ ಅತ್ಯಾಚಾರ ಮಾಡಿದ್ದರು. ಪೊಲೀಸರು ಆರೋಪಿಯ ಮೊಬೈಲ್ ನಂಬರ್ ಆಧಾರದಲ್ಲಿ ಬಂಧಿಸಿದ್ದರು.