ಪುಂಜಾಲಕಟ್ಟೆ: ಬಡ ಯುವತಿಯೋರ್ವಳಿಗೆ ಮದುವೆ ಮಾಡುವ ಉದ್ದೇಶದಲ್ಲಿ ಕ್ರೌಡ್ ಫಂಡಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಮಹಿಳೆ ಸಹಿತ ಮೂವರು ಹನಿಟ್ರ್ಯಾಪ್ ಮಾಡುವ ಮೂಲಕ ಆಸೀಫ್ ಆಪತ್ಬಾಂಧವ ಪಟಲಾಂ ಸಮಾಜ ಕಂಕಟರಾಗಿದ್ದಾರೆ. ಹನಿಟ್ರ್ಯಾಪ್‌ಗೊಳಗಾದ ವ್ಯಕ್ತಿ ಮನನೊಂದು ವಿಷ ಸೇವಿಸಿಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ನಿವಾಸಿ ಅಕ್ಬರ್ ಸಿದ್ದಿಕ್ (28) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರಿನ ಯುವತಿಯೋರ್ವಳ ಮದುವೆ ಉದ್ದೇಶಕ್ಕಾಗಿ ಅಲ್ ಮದೀನಾ ಟ್ರಸ್ಟ್ ಹೆಸರಿನಲ್ಲಿ ಅಕ್ಟರ್ ಸಿದ್ದಿಕ್ ಹಣ ಸಂಗ್ರಹ ಮಾಡುತ್ತಿದ್ದರು. ಆದರೆ ಹಣ ಹೆಚ್ಚು ಸಂಗ್ರಹವಾಗಿರಲಿಲ್ಲ.
ಈ ನಡುವೆ ನಾನು ಮದುವೆಯಾಗುವ ಯುವತಿಯ ಸೋದರಿ ಮಿನಾಜ್ ಎಂದು ಪರಿಚಯಿಸಿಕೊಂಡ ಯುವತಿಯೋರ್ವಳು ಎ.8ರಂದು ರಾತ್ರಿ ವಾಟ್ಸಾಪ್ ಕರೆ ಮಾಡಿ, ನೀವು ಇಷ್ಟು ಹಣ ಸಂಗ್ರಹ ಮಾಡಿದರೆ ಸಾಲದು. ದೊಡ್ಡ ಮೊತ್ತದ ಹಣ ಸಂಗ್ರಹ ಮಾಡಬೇಕು. ಇದಕ್ಕೆ ಬೇಕಾದರೆ ನಿಮ್ಮ ಜೊತೆಗೆ ಎಲ್ಲದಕ್ಕೂ ಸಹಕರಿಸುತ್ತೇನೆಂದು ಹೇಳಿದ್ದಲ್ಲದೆ, ವಾಟ್ಸಪ್ ಚಾಟಿಂಗ್ ಮತ್ತು ವೀಡಿಯೋ ಕರೆಯನ್ನೂ ಮಾಡಿದ್ದಳು ಎಂದು ಹೇಳಲಾಗಿದೆ. ಇದನ್ನು ಮಿನಾಜ್ ಗುಟ್ಟಾಗಿ ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡು ಆಸೀಫ್ ಪಟಲಾಂಗೆ ಕಳಿಸಿದ್ದಳು ಎನ್ನಲಾಗಿದೆ.
ಮರುದಿನ ಆಸಿಫ್ ಆಪತ್ಪಾಂಧವ ಮತ್ತು ರವೂಫ್ ಬೆಂಗರೆ ಸೇರಿ ಮಿನಾಜ್ ಜೊತೆಗೆ ನಡೆಸಿದ್ದ ಚಾಟಿಂಗ್ ಮತ್ತು ವೀಡಿಯೊ ಕರೆಯ ಸ್ಟ್ರೀನ್ ಶಾಟ್ ಮುಂದಿಟ್ಟು ಅಕ್ಟರ್ ಸಿದ್ದಿಕ್‌ಗೆ ಕರೆ ಮಾಡಿ ಬೆದರಿಸಲು ಆರಂಭಿಸಿದ್ದಾರೆನ್ನಲಾಗಿದೆ. 3 ಲಕ್ಷ ರೂ. ನಗದುಮತ್ತು 3 ಪವನ್ ಚಿನ್ನ ನೀಡಬೇಕು, ಎ. 10ರ ಒಳಗಾಗಿ ಹಣ ಸಂದಾಯ ಮಾಡದಿದ್ದರೆ ಚಾಟಿಂಗ್ ಮತ್ತು ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇದರಿಂದ ಭಯಗೊಂಡ ಅಕ್ಟರ್ ಸಿದ್ದಿಕ್ ಎ.12ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸಂಬಂಧ ಆಸಿಫ್ ಆಪದ್ಭಾಂಧವ, ರವೂಫ್ ಬೆಂಗರೆ ಮತ್ತು ಮಿನಾಜ್ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.