ಬ್ಯೂಟಿಫುಲ್‌ ಜೆಲಸ್!‌ ಲೀಲಾ ಜೊತೆ ಹೋಲಿಕೆ ಮಾಡಿದ್ದಕ್ಕೆ ಶ್ರೀನಿಧಿ ಕೆಂಡಾಮಂಡಲ!

ತೆಲಂಗಾಣ: ಹುಡುಗಿಯರಿಗೆ ತನ್ನ ಸೌಂದರ್ಯದ ವಿಷಯದಲ್ಲಿ ಹೊಟ್ಟೆಕಿಟ್ಟು ಇದ್ದಿದ್ದೇ. ತನಗಿಂತ ಬೇರೆ ಹುಡುಗಿ ಜಾಸ್ತಿ ಕ್ಯೂಟ್‌ ಇದ್ದರೆ ಏನಾದರೊಂದು ಕೊಂಕು ನುಡಿಯುತ್ತಾರೆ. ಒಬ್ಬಳ ಮುಂದೆ ಇನ್ನೊಬ್ಬಳನ್ನು ಹೊಗಳಿದರೂ ಅವರಿಗೆ ಸಹಿಸಿಲಿಕ್ಕೆ ಆಗುವುದಿಲ್ಲ. ಈ ಬುದ್ಧಿ ಸಿನಿಮಾ ತಾರೆಯರನ್ನೂ ಬಿಟ್ಟಿಲ್ಲ.

ಸೌಂದರ್ಯದ ವಿಷಯದಲ್ಲಿ ತೆಲುಗು ನಟಿ ಶ್ರೀನಿಧಿ ಅಗರ್ವಾಲ್‌, ಡ್ಯಾನ್ಸಿಂಗ್‌ ಕ್ವೀನ್‌ ಶ್ರೀಲೀಲಾ ಒಬ್ಬರಿಗೊಬ್ಬರು ಕಡಿಮೆ ಇಲ್ಲ. ಆದರೆ ತನ್ನನ್ನು ಶ್ರೀಲೀಲಾ ಜೊತೆ ಹೋಲಿಸಿದ್ದಕ್ಕೆ ಶ್ರೀನಿಧಿ ಗರಂ ಆಗಿದ್ದಾರೆ.

ಪ್ರಭಾಸ್ ಜೊತೆಗಿನ ‘ದಿ ರಾಜಾ ಸಾಬ್’ ಸಿನಿಮಾದಲ್ಲಿ ಬ್ಯುಸಿಯಾಗಿರುವ ತೆಲುಗು ನಟಿ ನಿಧಿ ಅಗರ್ವಾಲ್ ರನ್ನು ನೆಟ್ಟಿಗನೊಬ್ಬ ಡ್ಯಾನ್ಸಿಂಗ್ ಕ್ವೀನ್ ಶ್ರೀಲೀಲಾ ಜೊತೆ ಹೋಲಿಕೆ ಮಾಡಿದ್ದ. ಇದರಿಂದ ಗರಂ ಆದ ಶ್ರೀನಿಧಿ ಗರಂ ಆಗಿದ್ದಾಳೆ. ಆ ನೆಟ್ಟಿಗ ‘ಕಿಸ್ಸಿಕ್‌’ ಬೆಡಗಿ ಶ್ರೀಲೀಲಾ ಜೊತೆ ಹೋಲಿಕೆ ಮಾಡಿ ನಿಧಿ ಅವರನ್ನು ಕೆಣಕಿದ್ದಾನೆ. 2019ರಲ್ಲಿ ‘ಇಸ್ಮಾಟ್ ಶಂಕರ್’ ಬಳಿಕ ನಿಧಿ ಎಷ್ಟು ಸಿನಿಮಾ ಮಾಡಿದ್ದಾರೆ ಎಂದು ಪ್ರಶ್ನಿಸಿರುವ ನೆಟ್ಟಿಗ ಅದೇ 2021ರಲ್ಲಿ ಬಂದ ಶ್ರೀಲೀಲಾ 20 ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂದು ಕಮೆಂಟಿಸಿದ್ದ.

ಅದಕ್ಕೆ ನಿಧಿ ತಕ್ಕ ಉತ್ತರ ಕೊಟ್ಟಿದ್ದು, ‘ಇಸ್ಮಾರ್ಟ್‌ ಶಂಕರ್‌’ ಚಿತ್ರ ಆದ್ಮೇಲೆ ‘ಹೀರೋ’ ಸಿನಿಮಾ ಮಾಡಿದ್ದೀನಿ. ಬಳಿಕ 3 ತಮಿಳು ಸಿನಿಮಾದಲ್ಲಿ ನಟಿಸಿದ್ದೇನೆ. ನಾನು ನನ್ನ ಸಮಯ ತೆಗೆದುಕೊಂಡು ಒಳ್ಳೆಯ ಸ್ಕ್ರೀಪ್ಟ್ ಎಂದು ನನಗೆ ಅನಿಸುವ ಚಿತ್ರಗಳಿಗೆ ಸಹಿ ಹಾಕುತ್ತೇನೆ. ಕೆಲವೊಮ್ಮೆ ನನ್ನ ಆಯ್ಕೆ ತಪ್ಪಾಗಿರಬಹುದು. ಆದರೆ ನನ್ನ ಉದ್ದೇಶ ಒಳ್ಳೆಯ ಸಿನಿಮಾದ ಭಾಗವಾಗುವುದು. ನನಗೆ ಯಾವುದೇ ಆತುರವಿಲ್ಲ. ನಾನು ಇಲ್ಲೇ ಉಳಿಯಬೇಕು ಎಂದುಕೊಂಡಿದ್ದೇನೆ ಸಹೋದರ. ನನ್ನ ಬಗ್ಗೆ ನೀವು ಚಿಂತಿಸಬೇಡಿ ಎಂದು ನಯವಾಗಿ ತಿರುಗೇಟು ಕೊಟ್ಟಿದ್ದಾರೆ ನಿಧಿ ಅಗರ್ವಾಲ್. ನೆಟ್ಟಿಗನ ಪ್ರಕಾರ ತಾನು ಶ್ರೀಲೀಲಾಗಿಂತ ಕಡಿಮೆ ಚಂದ ಎಂದು ಅರ್ಥ ಮಾಡಿಕೊಂಡಿರುವ ಶ್ರೀನಿಧಿ ತಾನೇನೂ ಆಕೆಗಿಂತ ಕಡಿಮೆ ಏನಿಲ್ಲ ಎಂದು ಪರೋಕ್ಷವಾಗಿ ತೋರಿಸಿಕೊಟ್ಟಿದ್ದಾರೆ ಎಂದು ನೆಟ್ಟಿಗರು ಕಮೆಂಟಿಸಿದ್ದಾರೆ. ಶ್ರೀನಿಧಿ ಸದ್ಯಕ್ಕೆ ಪ್ರಭಾಸ್‌ ನಟನೆಯ ‘ದಿ ರಾಜಾ ಸಾಬ್’, ಪವನ್ ಕಲ್ಯಾಣ್ ಜೊತೆ ‘ಹರಿಹರ ವೀರ ಮಲ್ಲು’ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

error: Content is protected !!