‘ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ಎಂಟ್ರಿ ಕೊಟ್ಟಿದ್ದ ಮೇಘಾ ಶೆಟ್ಟಿ ಕನ್ನಡ ಮತ್ತು ತಮಿಳಿನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಈಕೆಗೆ ಶೂಟಿಂಗ್ ಶೆಡ್ಯೂಲ್‌ಗಳಿಲ್ಲ. ಹೀಗಾಗಿ ಖಾಲಿ ಕೂರುವುದು ಬೇಡ ಎಂದು ಮೇಘ ಶೆಟ್ಟಿ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ‘ಮುದ್ದು ಸೊಸೆ’ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು, ‘ಬಿಗ್ ಬಾಸ್’ ಖ್ಯಾತಿಯ ತ್ರಿವಿಕ್ರಮ್ ಮತ್ತು ಪ್ರತಿಮಾ (Pಇದರಲ್ಲಿ ಅತಿಥಿ ಪಾತ್ರವನ್ನು ಮೇಘಾ ಶೆಟ್ಟಿ ನಿಭಾಯಿಸಿದ್ದಾರೆ.
ಈ ಸೀರಿಯಲ್ ಅನ್ನು ಅವರೇ ಪ್ರಸ್ತುತಪಡಿಸುತ್ತಿದ್ದಾರೆ. ಈ ಸೀರಿಯಲ್ ನಿರ್ಮಾಣಕ್ಕೆ ಅವರು ಕೂಡ ಸಾಥ್ ನೀಡಿರೋದು ವಿಶೇಷ. ಸದ್ಯ ಇವರ ಕೈಯಲ್ಲಿ ‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’, ‘ಚೀತಾ’ ಹಾಗೂ ‘ಗ್ರಾಮಾಯಣ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಸಿನಿಮಾವೊಂದರಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾಗಳು ಅವರಿಗೆ ಯಶಸ್ಸು ತಂದುಕೊಡುತ್ತಾ? ಎಂದು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.