ಬೆಂಗಳೂರು: ಮುಡಾ ಕೇಸ್‌ನಲ್ಲಿ ಸಿಎಂ ಸಿದ್ಧರಾಮಯ್ಯಗೆ ಜನಪ್ರತಿನಿಧಿ ಕೋರ್ಟ್ ಬಿಗ್ ಶಾಕ್ ನೀಡಿದ್ದು, ಲೋಕಾಯುಕ್ತ ಪೊಲೀಸರಿಗೆ ತನಿಖೆ ಮುಂದುವರಿಸಲು ಸೂಚನೆ ನೀಡಿದೆ. ಮುಡಾ ಕೇಸ್‌ನಲ್ಲಿ ಬಿ ರಿಪೋರ್ಟ್ ಬಗ್ಗೆ ಸದ್ಯಕ್ಕೆ ಯಾವುದೇ ಆದೇಶವಿಲ್ಲ ಎಂದು ಕೋರ್ಟ್ ತಿಳಿಸಿದೆ.
ಲೋಕಾಯುಕ್ತರ ಅಂತಿಮ ವರದಿಯ ಬಳಿಕವೇ ಬಿ ರಿಪೋರ್ಟ್ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಕೋರ್ಟ್ ತಿಳಿಸಿದೆ. ಅಲ್ಲದೆ, ಇಡಿ ಕೂಡ ತಕರಾರು ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಕೋರ್ಟ್ ತಿಳಿಸಿದ್ದು, ಮೇ 7ರ ಒಳಗಾಗಿ ಲೋಕಾಯುಕ್ತ ಪೊಲೀಸರು ಅಂತಿಮ ವರದಿ ನೀಡಬೇಕು ಎಂದು ತಿಳಿಸಲಾಗಿದ್ದು, ಅಲ್ಲಿಯವರೆಗೆ ಇಡಿ ತನಿಖೆಗೂ ಕೂಡ ತಡೆ ಇರಲಿದೆ.
ಮುಡಾ ಕೇಸ್‌ನಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಆದ ಬಳಿಕ ಅದನ್ನು ಜನಪ್ರತಿನಿಧಿ ಕೋರ್ಟ್ ಒಪ್ಪಿಕೊಂಡು ರಿಲೀಫ್ ಪಡೆಯುವ ನಿರೀಕ್ಷೆಯಲ್ಲಿ ಸಿದ್ಧರಾಮಯ್ಯ ಆಸೆಗೆ ತಣ್ಣೀರು ಎರಚಿದಂತಾಗಿದೆ. ಸದ್ಯಕ್ಕೆ ತನಿಖೆ ಮುಂದುವರಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಕೋರ್ಟ್ ತಿಳಿಸಿದ್ದು, ಮೇ 7ರ ಒಳಗಾಗಿ ಕೋರ್ಟ್‌ಗೆ ಅಂತಿಮ ವರದಿ ಸಲ್ಲಿಕೆ ಮಾಡಬೇಕು ಎಂದು ಸೂಚನೆ ನೀಡಲಿದೆ. ಅಲ್ಲಿಯವರೆಗೂ ಬಿ ರಿಪೋರ್ಟ್ ಬಗ್ಗೆ ಯಾವುದೇ ಆದೇಶ ಇರೋದಿಲ್ಲ ಎನ್ನಲಾಗಿದೆ.