ಪ್ರವೀಣ್ ನೆಟ್ಟಾರ್ ಕೊಲೆ ಮಾಸ್ಟರ್ ಮೈಂಡ್ ಗೆ ಚುಂಬಿಸಿದ ಯುವಕ!

ಪ್ರವೀಣ್ ನೆಟ್ಟಾರ್ ಕೊಲೆ ಮಾಸ್ಟರ್ ಮೈಂಡ್ ಗೆ ಚುಂಬಿಸಿದ ಯುವಕ!


ಮಂಗಳೂರು
: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗೆ ಯುವಕನೊಬ್ಬ ಪೊಲೀಸ್ ಭದ್ರತೆ ನಡೆವೆಯೇ ಹಣೆಗೆ ಚುಂಬಿಸಿದ ಘಟನೆ ಇಂದು ಸಂಜೆ ನಡೆದಿದೆ.
ಶಾಫಿ ಬೆಳ್ಳಾರೆ ಪ್ರವೀಣ್ ನೆಟ್ಟಾರ್ ಹತ್ಯೆಯ ಮಾಸ್ಟರ್ ಮೈಂಡ್ ಆಗಿದ್ದು ಆತನನ್ನು ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆದುಕೊಂಡು ಬಂದಿದ್ದರು. ಆ ವೇಳೆ ಕೋರ್ಟ್ ಆವರಣದಲ್ಲಿ ಪೊಲೀಸರ ಭದ್ರತೆ ನಡುವೆ ಯುವಕನೊಬ್ಬ ಬಂದು ಹಣೆಗೆ ಮುತ್ತು ಕೊಟ್ಟಿದ್ದಾನೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಆರೋಪಿ ಶಾಫಿ ಬೆಳ್ಳಾರೆ ಈಗಾಗಲೇ ಎನ್‌ಐಎಯಿಂದ ಬಂಧನವಾಗಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

error: Content is protected !!