ಮೂಡಬಿದ್ರಿ: ಹಿಂದೂ ಮುಖಂಡ ಸಮಿತ್‌ರಾಜ್ ದರೆಗುಡ್ಡೆ ಎಂಬಾತನ ಸೋದರನನ್ನು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರ ತಂಡ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಮೂಡಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಧರೆಗುಡ್ಡೆ ಎಂಬಲ್ಲಿ ಕಳೆದ ಶನಿವಾರ ನಡೆದಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಧರೆಗುಡ್ಡೆ ನಿವಾಸಿ ಸಂತೋಷ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಆನೆಗುಡ್ಡೆ ನಿವಾಸಿಗಳಾದ ಗಣೇಶ್ ಹಾಗೂ ಆತನ ಮಗ ಅಕ್ಷಿತ್ ಕೊಲೆಗೆ ಯತ್ನಿಸಿದವರೆಂದು ಹೇಳಲಾಗಿದೆ.,.
ಸಂತೋಷ್ ಶನಿವಾರ ಸಂಜೆ ಸ್ಕೂಟರ್‌ನಲ್ಲಿ ಮನೆಗೆ ಬರುತ್ತಿದ್ದ ವೇಳೆ ರಿಕ್ಷಾದಲ್ಲಿ ಬೆನ್ನಟ್ಟಿಕೊಂಡು ಬಂದಿದ್ದ ಆರೋಪಿಗಳು ತಲವಾರು ದಾಳಿ ನಡೆಸಿದ್ದಾರೆ. ಇವರ ಸೋದರ ಸಮಿತ್ ರಾಜ್ ಹಿಂದೂ ಜಾಗರಣ ವೇದಿಕೆ ಮಂಗಳೂರು ಜಿಲ್ಲಾ ಸಹ ಸಂಯೋಜಕರಾಗಿದ್ದಾರೆ. ಮೂಡಬಿದ್ರೆ ಇನ್ ಸ್ಪೆಕ್ಟರ್ ಸಂದೇಶ ಪಿಜಿ ತನಿಖೆ ನಡೆಸುತ್ತಿದ್ದಾರೆ.