ಎ.12ರ ರಾತ್ರಿ 8:22ಕ್ಕೆ ನೀವೂ ನೋಡಬಹುದು ʼಪಿಂಕ್‌ ಮೂನ್‌ʼ

ಇದೇ ಏಪ್ರಿಲ್ 12ರ ರಾತ್ರಿ 8:22ರ ಸುಮಾರುಗೆ ಪಿಂಕ್ ಮೂನ್ ವಿದ್ಯಮಾನ ನಡೆಯಲಿದೆ. ಹುಣ್ಣಿಮೆಯ ದಿನ ನಡೆಯುವ ಈ ವಿದ್ಯಮಾನವನ್ನು ಎಲ್ಲರು ಕಣ್ತುಂಬಿಕೊಳ್ಳಬಹುದು. ಆದ್ರೆ ಇದು ಸೂಪರ್ ಮೂನ್ ಆಗಿರುವುದಿಲ್ಲ ಬದಲಿಗೆ ಇದೊಂದು ಮೈಕ್ರೋ ಮೂನ್ ವಿದ್ಯಮಾನ ಎಂದು ತಿಳಿದುಬಂದಿದೆ.

ಈ ಹುಣ್ಣಿಮೆಯು ಚಂದ್ರನು ಭೂಮಿಯಿಂದ ಅತ್ಯಂತ ದೂರದಲ್ಲಿದ್ದಾಗ ಇದು ಸಂಭವಿಸುತ್ತದೆ. ಆದ್ದರಿಂದ ಇದನ್ನು ಮೈಕ್ರೋಮೂನ್ ಎಂದು ಕರೆಯಲಾಗಿದೆ. ಹೀಗಾಗಿ ಮೈಕ್ರೋಮೂನ್ ಸೂಪರ್‌ಮೂನ್‌ಗಿಂತ ಚಿಕ್ಕದಾಗಿಯೂ ಹಾಗೆ ಕಡಿಮೆ ಬೆಳಕನ್ನು ಹೊಂದಿರುತ್ತದೆ. ಹೀಗಾಗಿ ಏಪ್ರಿಲ್ 12ರಂದು ಮೈಕ್ರೋ ಮೂನ್ ನೋಡಬಹುದು. ಅಚ್ಚರಿ ಏನೆಂದರೆ ಚಂದ್ರನು ಈ ದಿನ ಸಂಪೂರ್ಣ ನಿಮಗೆ ಗುಲಾಬಿ ಬಣ್ಣದಲ್ಲಿ ಕಾಣಿಸುವುದಿಲ್ಲ. ನಿಗದಿತ ಗಾತ್ರಕ್ಕಿಂತ ಕಡಿಮೆ ಹಾಗೂ ದೂರದಲ್ಲಿ ಚಂದ್ರನ ಸ್ಥಾನ ಇರುವ ಕಾರಣ ಮಂದವಾಗಿ ಕಾಣಿಸಲಿದೆ. ಇದು ಗುಲಾಬಿ ಬಣ್ಣ ಹೊಂದಿರುವಂತೆ ಭಾಸವಾಗಲಿದೆ. ಗುಲಾಬಿ ಚಂದ್ರನನ್ನು ಏಪ್ರಿಲ್ 12ರ ರಾತ್ರಿ ಹಾಗೂ 13ರ ರಾತ್ರಿಯಲ್ಲಿ ನೋಡಬಹುದು. ಆದ್ರೆ ಏಪ್ರಿಲ್ 12ರ ರಾತ್ರಿ 8:22ಕ್ಕೆ ತನ್ನ ಪರಿಪೂರ್ಣ ಮಟ್ಟ ತಲುಪಲಿದೆ. ಈ ಸಮಯದಲ್ಲಿ ಚಂದ್ರನು ಭೂಮಿಯಿಂದ ಬಹಳ ದೂರದಲ್ಲಿರಲಿದ್ದಾನೆ.

error: Content is protected !!