ಹೊಸದಿಲ್ಲಿ: ಅಡುಗೆ ಅನಿಲ ವಿತರಣಾ ಕಂಪೆನಿಗಳು ಪ್ರತಿ ಸಿಲಿಂಡರ್‌ಗಳ ದರದಲ್ಲಿ 50 ರೂ. ಹೆಚ್ಚಳಗೊಳಿಸಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು.
ಉಜ್ವಲ ಮತ್ತು ಸಾಮಾನ್ಯ ವರ್ಗದ ಗ್ರಾಹಕರಿಗೆ ಕೂಡ ಗ್ಯಾಸ್ ಬೆಲೆ ಹೆಚ್ಚಳ ಅನ್ವಯಿಸಲಿದೆ ಎಂದು ಸಚಿವರು ತಿಳಿಸಿದರು. ಇದರೊಂದಿಗೆ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಸಾಮಾನ್ಯ ಗ್ರಾಹಕರಿಗೆ 803 ರಿಂದ 853ರೂ.ಗೆ ಮತ್ತು ಉಜ್ವಲ ಯೋಜನೆಯಡಿಯಲ್ಲಿ 14.2 ಕೆಜಿ ಸಿಲಿಂಡರ್‌ಗೆ 503 ರಿಂದ 553 ರೂ.ಗೆ ಹೆಚ್ಚಳವಾಗಿದೆ.