ಪೊಳಲಿ ಚೆಂಡು ಮಳಲಿಗೆ ಬರುವುದೇಕೆ? ರಾಣಿ ಅಬ್ಬಕ್ಕನಿಗೂ ಪೊಳಲಿ ಚೆಂಡಿಗೂ ಏನು ಸಂಬಂಧ?

ಮಂಗಳೂರು: ಇತಿಹಾಸ ಪ್ರಸಿದ್ಧ ಸಾವಿರ ಸೀಮೆ ಪೊಳಲಿ ರಾಜರಾಜೇಶ್ವರಿ ದೇವಿಯ ವಾರ್ಷಿಕ ಜಾತ್ರೆ ಈಗಾಗಲೇ ಆರಂಭಗೊಂಡಿದ್ದು, ಏಪ್ರಿಲ್ 5ರಿಂದ ಐದು ದಿನಗಳ ಚೆಂಡು ನಡೆಯಲಿದೆ. ಈ ಚೆಂಡನ್ನು ಮೂಡಬಿದ್ರೆಯ ಮಿಜಾರು ಪದ್ಮನಾಭ ಸಮಗಾರ ಎಂಬವರು ತಯಾರಿಸಿದ್ದು, ಅವರ ಮನೆಯಿಂದ ಸಂಪ್ರದಾಯದಂತೆ ಕಡಪುಕರಿಯದ ಗಾಣಿಗ ಸಮುದಾಯದವರು ತಂದು ಪೊಳಲಿ ದೇಗುಲಕ್ಕೆ ಒಪ್ಪಿಸಿದರು.


ಹಿನ್ನೆಲೆ: ಪುತ್ತಿಗೆಯಿಂದ ಪೊಳಲಿಗೆ ಚೆಂಡನ್ನು ತರುವ ಜವಾಬದ್ದಾರಿ ಮಣೇಲ್(ಮಳಲಿ) ಕಡಪುಕರಿಯ ಗಾಣಿಕ ಸಮಾಜದವರದ್ದು. ಈ ಚೆಂಡನ್ನು ತರುವ ಪ್ರಕ್ರಿಯೆ ಅನೇಕ ರೀತಿ- ರಿವಾಜುಗಳನ್ನು ಒಳಗೊಂಡಿದೆ. ಪೊಳಲಿ ದೇವಸ್ಥಾನವವು ಮೂಡಬಿದ್ರೆ ಪುತ್ತಿಗೆ ಚೌಟ ಅರಸರ ಆಡಳಿತಕ್ಕೆ ಒಳಪಟ್ಟ ಕಾಲದಲ್ಲಿ ಪುತ್ತಿಗೆ ಚೌಟ ಅರಸರ ಸೋಮನಾಥ ದೇವಾಲಯದಿಂದ

ಹೊರಡುವ ಚರ್ಮದ ಚೆಂಡಿನ ಮೆರವಣಿಗೆ ರಾಣಿ ಅಬ್ಬಕ್ಕನ ಊರಾದ ಮಣೇಲ್(ಈಗಿನ ಮಳಲಿ)ಗೆ ಬಂದು ಚೌಟ ವಶಂಸ್ಥ ಅಬ್ಬಕ್ಕನ ಮಣೇಲ್ ಅರಮನೆಯಲ್ಲಿ ರಾಣಿಯ ಸಮ್ಮುಖದಲ್ಲಿ ಚೆಂಡನ್ನು ಇಟ್ಟು, ಪ್ರದರ್ಶಿಸಲಾಗುತ್ತದೆ. ನೆರೆದ ಊರಿನ ಜನರ ಸಂಭ್ರಮಾಚರಣೆಯ ಬಳಿಕ

ಚೆಂಡಿಗೆ ಸಲ್ಲಬೇಕಾದ ಗೌರವಯುತವಾದ ರಾಜಮರ್ಯಾದೆ ಸಲ್ಲಿಕೆಯಾದ ನಂತರ ಮಣೇಲ್‌ನಿಂದ ಪೊಳಲಿಗೆ ಚೆಂಡನ್ನು ಹೋಗುವ ಪದ್ಧತಿ ನಡೆಯುತ್ತಿತ್ತು ಎಂದು ಇತಿಹಾಸಗಳಿಂದ ತಿಳಿದುಬರುತ್ತದೆ.

ಅಬ್ಬಕ್ಕನ ಕಾಲಾನಂತರ ಈ ಪ

ದ್ಧತಿಯನ್ನು ಆಕೆಯ ಮನೆತನದ ಕಟ್ಟೆಮಾರ್ ಮನೆತನದವರು ಮುಂದುವರಿಸುತ್ತಾ ಬರುತ್ತಿದ್ದಾರೆ. ಈಗಲೂ ಚೆಂಡಿನ ಮೆರವಣಿಗೆ ಮಳಲಿ ಕಟ್ಟೆಮಾರು ಮನೆಗೆ ಬರುವ ಸಂಪ್ರದಾಯ ಸಾಂಕೇತಿಕವಾಗಿ ಮುಂದುವರಿದಿದೆ.

ಕಟ್ಟೆಮಾರಿನ ಪ್ರಶಾಂತ್‌ ಕುಮಾರ್‌ ಜೈನ್‌ ಮನೆಯವರು ತಮ್ಮ ಮನೆಯ ಮನೆಯ ಅಂಗಳವನ್ನು ಸಾರಿಸಿ, ರಂಗೋಲಿ ಹಾಕಿ ಸಿಂಗರಿಸಿದ್ದರು. ಗಾಣಿಗ ಸಮುದಾಯದ ಗಂಗಾಧರ ಗಾಣಿಗ ಅವರು ಚೆಂಡನ್ನು ಹಿಡಿದುಕೊಂಡು ಬಂದರು. ಅವರೊಂದಿಗೆ ಉಮೇಶ ಗಾಣಿಗ, ಲೋಕಯ್ಯ ಗಾಣಿಗ, ಪ್ರಕಾಶ್‌ ಗಾಣಿಗ, ಪ್ರಕಾಶ್‌ ಸಫಲಿಗ ಪೊಳಲಿ ಹಾಗೂ ಧನು ಕಡಪುಕರಿಯ ಜೊತೆಯಿದ್ದರು. ಪ್ರಶಾಂತ್‌ ಕುಮಾರ್‌ ಜೈನ್ ಅವರು ತನ್ನ ಪತ್ನಿ, ಕುಟುಂಬಿಕರ ಸಮೇತ ಸ್ಬಾಗತಿಸಿದರು.

ಬಳಿಕ ಚೆಂಡನ್ನು ಮನೆಯಂಗಳದಲ್ಲಿ ಪ್ರದರ್ಶಿಸಲಾಯಿತು. ಬಂದರಿಗೆ ಕುಡಿಯಲು ಬೆಲ್ಲ, ನೀರು, ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಚೆಂಡನ್ನು ಹೊತ್ತುಕೊಂಡು ಬಂದ ಗಾಣಿಗ ಸಮುದಾಯದವರಿಗೆ ಉಡುಗೊರೆಗಳನ್ನು ನೀಡಿದರು.


ಉಳ್ಳಾಲ ರಾಣಿ ಅಬ್ಬಕ್ಕನ ತವರು ಮನೆ ಮಣೇಲ್‌ ಆಗಿದ್ದು, ಅರಸೊತ್ತಿಗೆಯ ಕಾಲದಲ್ಲಿ ಪೊಳಲಿ ಚೆಂಡಿಗೆ ರಾಜಮರ್ಯಾದೆ ಕೊಡುವ ಸಂಪದ್ರಾಯ ಇತ್ತು. ಅದನ್ನು ಅಬ್ಬಕ್ಕನ ವಂಶಜರಾದ ಕಟ್ಟೆಮಾರ್‌ ಮನೆತನದವರು ಸಾಂಕೇತಿಕವಾಗಿ ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಅಲ್ಲಿಂದ ಚೆಂಡು ಇಟ್ಟು ಉಳಿಪಾಡಿಗುತ್ತಿನಲ್ಲಿ ಪ್ರಾರ್ಥಿಸಲಾಯಿತು. ಹಿಂದಿನ ಸಂಪ್ರದಾಯದಂತೆ ಕಟ್ಟೆಮಾರಿನಲ್ಲಿ ಸನ್ಮಾನ ಸ್ವೀಕರಿಸಿ ಮಣೇಲ್-ಪೊಳಲಿ ಸೇತುವೆ ಮುಖಾಂತರ ಸಾಗಿ ಕಡಪುಕರಿಯದ ಗಾಣಿಗ ಮನೆಯಲ್ಲಿ ಚೆಂಡನ್ನು ಇಟ್ಟು, ದೈವಗಳ ಮುಂದೆ ಪ್ರಾರ್ಥಿಸಲಾಯಿತು.

ಅಲ್ಲಿಂದ ಚೆಂಡನ್ನು ಗಾಣಿಗ ಸಮುದಾಯದವರು ಪೊಳಲಿ ದೇವಸ್ಥಾನಕ್ಕೆ ಒಪ್ಪಿಸಿದರು. ಪೊಳಲಿ ದೇಗುಲದಲ್ಲಿ ಗಾಣಿಗ ಸಮುದಾಯದವರೇ ಚೆಂಡನ್ನು ಹಿಡಿದುಕೊಂಡು ಹೋಗುವ ಕ್ರಮವಿದೆ. ಅಲ್ಲದೆ ಇಳಾಲ್‌. ದೀವಟಿಗೆ, ಕಂಚಿತಿಪಲೆಗೆ ಎಣ್ಣೆ ಹಾಕುವ ಜವಾಬ್ದಾರಿ ಇದೇ ಸಮುದಾಯದವರದ್ದು ಎಂದು ಕಡಪುಕರಿಯದ ಮನೆಯವರು ಮಾಹಿತಿ ನೀಡಿದ್ದಾರೆ.

 

ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ

error: Content is protected !!