71 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಪಾಟ್ನಾ: ಸೀಟು ಹಂಚಿಕೆ ಬಿಕ್ಕಟ್ಟು ಮುಂದುವರೆದಿರುವ ನಡುವೆಯೇ ಇಂದು(ಅ.14) ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಮಂಗಳವಾರ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಒಟ್ಟು 71 ಅಭ್ಯರ್ಥಿಗಳ ಹೆಸರುಗಳಿದ್ದು ಅದರಲ್ಲಿ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಅವರಿಗೆ ತಾರಾಪುರದಿಂದ ಮತ್ತು ವಿಜಯ್ ಸಿನ್ಹಾ ಅವರಿಗೆ ಲಖಿಸರಾಯ್‌ನಿಂದ ಟಿಕೆಟ್ ನೀಡಲಾಗಿದೆ.

ಇದಲ್ಲದೆ, ಸಚಿವರಾದ ಮಂಗಲ್ ಪಾಂಡೆ, ನಿತೀಶ್ ಮಿಶ್ರಾ, ನೀರಜ್ ಕುಮಾರ್ ಬಬ್ಲು, ಜೀವೇಶ್ ಮಿಶ್ರಾ, ರಾಜು ಸಿಂಗ್, ಕೃಷ್ಣ ಕುಮಾರ್ ಮಂಟು, ಸುರೇಂದ್ರ ಮೆಹ್ತಾ, ಡಾ. ಸುನಿಲ್ ಕುಮಾರ್, ಸಂಜಯ್ ಸರವಾಗಿ ಮತ್ತು ಡಾ. ಪ್ರೇಮ್ ಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದೆ.

ಬಿಜೆಪಿ ಒಟ್ಟು 101 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಈಗಾಗಲೇ ಮೊದಲ ಪಟ್ಟಿಯನ್ನು ಇಂದು ಬಿಡುಗಡೆಗೊಳಿಸಿದ್ದು 71 ಅಭ್ಯರ್ಥಿಗಳಲ್ಲಿ ರೇಣು ದೇವಿ ಮತ್ತು ಶ್ರೇಯಸಿ ಸಿಂಗ್ ಸೇರಿ ಒಟ್ಟು ಒಂಬತ್ತು ಮಹಿಳೆಯರು ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.

2020 ರಲ್ಲಿ, ಬಿಜೆಪಿ 110 ಸ್ಥಾನಗಳಲ್ಲಿ ಸ್ಪರ್ಧಿಸಿ 74 ಸ್ಥಾನಗಳನ್ನು ಗೆದ್ದಿತು. ಪ್ರಸ್ತುತ, ಬಿಹಾರದಲ್ಲಿ ಬಿಜೆಪಿ 80 ಶಾಸಕರನ್ನು ಹೊಂದಿದೆ. 2025 ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳುವುದರ ಜೊತೆಗೆ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ದಾಖಲೆಯನ್ನು ಬರೆಯಲಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.

error: Content is protected !!