ಸುರತ್ಕಲ್ ನಲ್ಲಿ ಹಿರಿಯರ ಕ್ರಿಕೆಟ್ ಹಬ್ಬ
ಸುರತ್ಕಲ್: ಪ್ರತಿಯೊಬ್ಬರ ಬದುಕಿನಲ್ಲಿ ಹೊಸ ಚೈತನ್ಯವನ್ನು ಮೂಡಿಸುವ ಹೊಸ ಆಲೋಚನೆಗಳನ್ನು ಬೆಳೆಸುವ ಅವಿಭಾಜ್ಯ ಅಂಗ ಕ್ರೀಡೆ ಎಂದು ಇಡ್ಯಾ ಸುರತ್ಕಲ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಐ ರಮಾನಂದ್ ಭಟ್ ನುಡಿದರು. ಅವರು ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಸುರತ್ಕಲ್ ಆಶ್ರಯದಲ್ಲಿ ರಾಜ್ಯ ಮಟ್ಟದ ಹಿರಿಯರ ಕ್ರಿಕೆಟ್ ಹಬ್ಬ ಸೀಸನ್ 4 ಸುರತ್ಕಲ್ ಗೋವಿಂದದಾಸ ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಿದ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಂಗಳೂರು ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ಎಸ್ ಗಣೇಶ್ ರಾವ್ ಮಾತನಾಡಿ ಜಾತಿ, ಮತ, ಪಕ್ಷ ಮರೆತು ಈ ಕ್ರೀಡೆಯಲ್ಲಿ ಹಿರಿಯಲ್ಲೆರೂ ಭಾಗವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕ್ರೀಡೆಯ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಸುರತ್ಕಲ್ ಸ್ಪೋರ್ಟ್ಸ್ ಕ್ಲಬ್ ಅಭಿನಂದನೆ ಸಲ್ಲಿಸುತ್ತೇನೆ ಮುಂದೆಯೂ ಇಂತಹ ಕಾರ್ಯ ನಿರಂತರ ನಡೆಯಲಿ ಎಂದರು.
ವೇದಿಕೆಯಲ್ಲಿ ಮಾಜಿ ಶಾಸಕ ಬಿ.ಎ,ಮೊಯಿದಿನ್ ಬಾವ, ಜ್ಯೋತಿಷ್ಯರಾದ ನಾಗೇಂದ್ರ ಭಾರದ್ವಾಜ್, ಮಂಗಳೂರು ಸಿಸಿಬಿ ಸಹಾಯಕ ಪೋಲಿಸ್ ಅಯುಕ್ತರಾದ ಮನೋಜ್ ಕುಮಾರ್ ನಾಯ್ಕ್, ದಕ್ಷಿಣ ಕನ್ನಡ ಜಿಲ್ಲಾ ಬಸ್ಸು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರು, ಮಂಗಳೂರು ಎಸ್ ಡಿ ಸಿ ಸಿ ಬ್ಯಾಂಕ್ ನ ಉಪಾಧ್ಯಕ್ಷರಾದ ವಿನಯಕುಮಾರ್ ಸೂರಿಂಜೆ, ನಿತಿನ್ ಹೆಗಡೆ ಕಾವರಮನೆ, ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ ಬಾಳ, ಎಂ,ಅರ್,ಪಿ,ಎಲ್ ಹಣಕಾಸು ವಿಭಾಗದ ಅಧಿಕಾರಿ ಅನಿಲ್ ಕುಮಾರ್, ಕರಾಟೆ ಶಿಕ್ಷಕ ಈಶ್ವರ ಕಟೀಲು, ಉದ್ಯಮಿ ರಮೇಶ್ ಶ್ರೇಯಾಸ್ , ಸುರತ್ಕಲ್ ಡಿ.ಕೆ,ಅಸೋಸಿಯೇಟ್ ಮಾಲಕರಾದ ದೇವೇಂದ್ರ ಕೆ ಶೆಟ್ಟಿ, ಕಾಟಿಪಳ್ಳ ದಂತ ವೈದ್ಯರಾದ ಡಾ!ಅರವಿಂದ್ ಭಟ್, ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ನ ಅಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿ, ಸಂಚಾಲಕಾದ ಮನೋಹರ ಶೆಟ್ಟಿ ಸೂರಿಂಜೆ, ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ ಮುಂತಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಕಿರಣ್ ಅಚಾರ್ಯ ಸ್ವಾಗತಿಸಿ, ಗುರುರಾಜ್ ವಂದಿಸಿದರು.