ಇಂಟರ್‌ನ್ಯಾಷನಲ್ ನಂಬರ್‌ನ ಬೆದರಿಕೆ ಕರೆಗಳಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಬೆಂಗಳೂರು: ಇಂಟರ್‌ನ್ಯಾಷನಲ್ ನಂಬರ್ನಿಂದ ಬೆದರಿಕೆ ಕರೆಗಳು ಬರುತ್ತಿರುವುದಾಗಿ ತಿಳಿಸಿದ ಸಚಿವ ಪ್ರಿಯಾಂಕ್ ಖರ್ಗೆ, “ಯಾವುದೇ ಕರೆ ಬಂದರೂ ಹೆದರುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, “ನೋ ಕಾಲರ್ ಐಡಿ, ಅಂತರಾಷ್ಟ್ರೀಯ ನಂಬರ್ ಇದೆ. ಕೆಟ್ಟ ಭಾಷೆಯಿಂದ ನಮಗೆ, ಕುಟುಂಬದವರಿಗೆ, ಕುಟುಂಬದವರ ಪರಿಸ್ಥಿತಿ ಬಗ್ಗೆ ಮಾತಾನಾಡುತ್ತಾರೆ. ಇದು ಸಹಜ, ವಿರೋಧ ಪಕ್ಷದಲ್ಲಿದ್ದಾಗಲೂ ಇದೇ ಸಮಸ್ಯೆ ಇತ್ತು” ಎಂದರು.

“ಗಾಂಧೀಜಿ, ಅಂಬೇಡ್ಕರ್‌ಗೆ ಬಿಟ್ಟಿಲ್ಲ, ಇವರು ನಮ್ಮನ್ನು ಬಿಡುತ್ತಾರಾ?” ಎಂದು ಪ್ರಶ್ನಿಸಿದ ಖರ್ಗೆ, ನಮ್ಮ ಆಚರಣೆ ಬಗ್ಗೆ ತಂದೆ ತಾಯಿ ಕಲಿಸುತ್ತಾರೆ. ಸರ್ಕಾರಿ ಶಾಲೆಯಲ್ಲಿ ಹೋಗುವವರು ಬಡ ಮಕ್ಕಳು. ಅಲ್ಲಿ ಹೋಗಿ ದೊಣ್ಣೆ ಬೀಸೋದು, ಆ ಮಕ್ಕಳಿಗೆ ಕಲಿಸೋದು ಎಷ್ಟು ಸರಿ? ಇದಕ್ಕೆ ನಮ್ಮ ಮಕ್ಕಳು ಯಾಕೆ ಬಲಿಯಾಗಬೇಕು? ಮೊದಲು ಮನೆ ಮಕ್ಕಳಿಗೆ ಇದನ್ನ ಹೇಳಿಕೊಡಿ. ಬಿಜೆಪಿ ನಾಯಕರ ಮಕ್ಕಳಿಗೆ ದೊಣ್ಣೆ ಕೊಟ್ಟು ಕಲಿಸಲಿ. ಅವರ ಮನೆ ಮಕ್ಕಳು ಯಾವಾಗ ಧರ್ಮ ರಕ್ಷಣೆಗೆ, ಗೋ ರಕ್ಷಣೆಗೆ ಇಳೀತಾರೆ ಹೇಳಲಿ. ಐ ಲವ್ ಆರ್‌ಎಸ್‌ಎಸ್ ಅನ್ನೋವ್ರು ದೇಶ ದ್ರೋಹಿಗಳು. ಇದು ಬೆದರಿಕೆ ಅಲ್ಲ, ಬೆದರಿಕೆ ಕರೆ ಅಷ್ಟೆ. ಜನ ಇದ್ದಾರೆ, ಸರ್ಕಾರ ನಮ್ಮ ಪರ ಇದೆ, ಅಷ್ಟು ಸಾಕು ಎಂದು ಟಾಂಗ್ ಕೊಟ್ಟಿದ್ದಾರೆ.

error: Content is protected !!