ಮಂಗಳೂರು: ಬದ್ರಿಯಾ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದರಸ ಬಜಾಲ್ ಇದರ ಜಮಾಅತ್ ವತಿಯಿಂದ ನಂತೂರು ತೋಟ ಹೌಸ್‌ಗೆ ಸಮಾರು ಹನ್ನೆರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ ರಸ್ತೆ ನಿರ್ಮಾಣ ಮಾಡಿಕೊಡಲಾಯಿತು. ಇದರ ಉದ್ಘಾಟನಾ ಸಮಾರಂಭ ಶುಕ್ರವಾರ ಜಮಾಅತ್ ಅಧ್ಯಕ್ಷರಾದ ಜನಾಬ್ ಅಬ್ದುಲ್ ರವೂಫ್ ಅವರ ನೇತೃತ್ವದಲ್ಲಿ ನಡೆಯಿತು. ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರಾದ ಕೆ.ಇ.ಅಶ್ರಫ್ ರಸ್ತೆ ಉದ್ಘಾಟಿಸಿ ಸಾರ್ವಜನಿಕರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಜಮಾಅತ್ ಖತೀಬರಾದ ಬಹು| ಅಬ್ದುನ್ನಾಸಿರ್ ಸಅದಿ ದುಆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಬದ್ರಿಯಾ ಜುಮಾ ಮಸೀದಿ ಬಜಾಲ್, ನಂತೂರು ಜಮಾಅತ್ ಮಾಜಿ ಅಧ್ಯಕ್ಷರಾದ ಜ|ಹಾಜಿ ಬಿ. ಯನ್ ಅಬ್ಬಾಸ್, ಸಂಚಾಲಕರಾದ ಬಿ.ಫಕ್ರುದ್ದೀನ್, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಜನಾಬ್ ಅಹ್ಮದ್ ಬಾವ, ಬದ್ರಿಯಾ ಜುಮಾ ಮಸೀದಿ ಬಜಾಲ್ ನಂತೂರು ಜಮಾಅತ್ ಮಾಜಿ ಕಾರ್ಯದರ್ಶಿ ಜನಾಬ್ ಮೊಯ್ದೀನ್ ಕುಂಞಿ, ಬಿ.ಜೆ.ಯಂ. ಮಾಜಿ ಸದಸ್ಯರಾದ ಅಬ್ದುಲ್ ಖಾದರ್ ಕೆಳಗಿನ ಮನೆ, ಬಿ.ಜೆ.ಯಂ. ಉಪಾಧ್ಯಕ್ಷರಾದ ಹಾಜಿ ಯಚ್.ಯೆಸ್ .ಹನೀಫ್, ಬಿ.ಜೆ.ಯಂ ಕೋಶಾದಧಿಕಾರಿಯಾದ ಜ| ಅಬ್ದುಲ್ ಸಲಾಂ, ಬಿ.ಜೆ.ಯಂ.ಉಪಾದ್ಯಕ್ಷರಾದ ಜ|ಯಂ.ಯಚ್.ಮುಹಮ್ಮದ್ ಫೈಸಲ್ ನಗರ, ಗೌಸಿಯಾ ಜುಮಾ ಮಸೀದಿ ಫೈಸಲ್ ನಗರ ಅಧ್ಯಕ್ಷರಾದ ಜ| ಅಬ್ದುಲ್ ರಝಾಕ್, ತರ್ಬಿಯತುಲ್ ಇಸ್ಲಾಂ ಮಸೀದಿ ಶಾಂತಿನಗರ ಅಧ್ಯಕ್ಷರಾದ ಜ|ಇಕ್ಬಾಲ್, ಬಿ.ಜೆ.ಯಂ ಉಸ್ತುವಾರಿಯಾದ ನಝೀರ್ ಬಜಾಲ್ ಹಾಗೂ ಹಸನಬ್ಬ ಮೋನು, ಬಿ.ಜೆ.ಯಂ ಸದಸ್ಯರಾದ ತೋಟ ಅಶ್ರಫ್, ಬಿ.ಜೆ.ಯಂ ಜೊತೆ ಕಾರ್ಯದರ್ಶಿ ಅಬ್ದುಲ್ ರವೂಫ್ ಶಾಂತಿನಗರ, ಯೂಸುಫ್ ಶಾಂತಿನಗರ, ಹನೀಫ್ ಕೆಳಗಿನ ಮನೆ, ಇಕ್ಬಾಲ್ ಅಹ್ಸನಿ, ನಝೀರ್ ಪಾಂಡೇಲ್, ಅಬ್ಬಾಸ್ ಶಾಂತಿನಗರ ಹಾಗೂ ಇತರ ಆಡಳಿತ ಸಮಿತಿ ಸದಸ್ಯರು ಮತ್ತು ಸರ್ವ ಜಮಾಅತ್ ಸದಸ್ಯರು ಭಾಗವಹಿಸಿದರು.
ಬಿ.ಜೆ.ಯಂ ಪ್ರಧಾನ ಕಾರ್ಯದರ್ಶಿಯಾದ ಅಬ್ದುಲ್ ಹಮೀದ್ ಸ್ವಾಗತಿಸಿ ಕೊನೆಗೆ ವಂದಿಸಿದರು.