ಬಂಟ್ವಾಳ: ಸಿಡಿಲು ಬಡಿದ ಪರಿಣಾಮ ವಿದ್ಯುತ್ ಪರಿಕರಗಳೆಲ್ಲಾ ಹಾನಿಯಾದ ಘಟನೆ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮ ಕಾವಳಕಟ್ಟೆ ಎಂ.ಪಿ ಸರ್ಕಲ್ ನಿವಾಸಿ ಸೈಫುಲ್ಲಾ ಎಂಬವರ ಮನೆಯಲ್ಲಿ ಸಂಭವಿಸಿದೆ.
ಅವರ ಮನೆಯ ಕರೆಂಟ್‌ನ ಮೀಟರ್, ಫ್ಯಾನ್, ಟಿ.ವಿ ಹಾಗೂ ಕೆಲ ವಸ್ತುಗಳು ವಿದ್ಯುತ್‌ನ ಅಘಾತಕ್ಕೆ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಮನೆ ಮಂದಿ ಪಾರಾಗಿದ್ದಾರೆ. ಮೆಸ್ಕಾಂ ಹಾಗೂ ಕಂದಾಯ ಇಲಾಖೆಗೆ ಮಾಹಿತಿ ನೀಡಲಾಗಿದೆ.