ಉತ್ತರ ಕನ್ನಡ: ಆಂಕೋಲ ರಾಮನಗುಳಿ ಬಳಿ ಕ್ರೆಟಾ ಕಾರಲ್ಲಿ ಪತ್ತೆಯಾಗಿದ್ದ 1.14 ಕೋಟಿ ರೂ. ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಮೂಲದ ಕುಖ್ಯಾತ ರೌಡಿ ತಲ್ಲತ್, ನಪ್ಪಾಲ್ ಹಾಗೂ ಸಾಹೀಲ್ ಎಂಬವರನ್ನು ಮುಂಬೈನಲ್ಲಿ ಬಂಧಿಸಿ ಕರೆತರುತ್ತಿದ್ದ ವೇಳೆ ಪೊಲೀಸರಿಗೆ ಹಲ್ಲೆಗೈದು ಪರಾರಿಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದ್ದು ಈ ವೇಳೆ ಪೊಲೀಸರು ಗುಂಡು ಹಾರಾಟ ನಡೆಸಿದ್ದಾರೆ.
ಘಟನೆಯಲ್ಲಿ ತಲ್ಲತ್ ಹಾಗೂ ನೌಫಲ್ ಕಾಲಿಗೆ ಗುಂಡೇಟು ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂಕೋಲಾ ಪೊಲೀಸರು ಆರೋಪಿಗಳನ್ನು ಮುಂಬಯಿಯಲ್ಲಿ ಬಂಧಿಸಿದ್ದು ಹಳಿಯಾಳದ ಭಗವತಿ ಅರಣ್ಯ ಪ್ರದೇಶದಲ್ಲಿ ಮೂತ್ರ ವಿಸರ್ಜನೆಗೆಂದು ವಾಹನ ನಿಲ್ಲಿಸಿದ್ದ ವೇಳೆ ತಲ್ಲತ್ ಹಾಗೂ ನೌಫಾಲ್ ಪೊಲೀಸರ ಮೇಲೆ ಬಾಟಲಿ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿ ಕಾಡಿನಲ್ಲಿ ಪರಾರಿಯಾಗಲು ಯತ್ನಿಸಿದ್ದು ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಪೊಲೀಸರಿಗೂ ಗಾಯಗಳಾಗಿದ್ದು, ಹಳಿಯಾಳ ತಾಲೂಕು ಆಸ್ಪತ್ರೆಯಲ್ಲಿ ಆರೋಪಿಗಳು ಹಾಗೂ ಪೊಲೀಸರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜನವರಿ 28 ರಂದು ಅಂಕೋಲಾದ ರಾಮನಗುಳಿ ಬಳಿ ಮಂಗಳೂರಿನ ಚಿನ್ನದ ಆಂಗಡಿ ಮಾಲಕ ರಾಜೇಶ ಪವಾರ್ ಅವರಿಗೆ ಸೇರಿದ್ದ ಕಾರಿನಲ್ಲಿ 1.14 ಕೋಟಿ ರೂ. ನಗದು ಪತ್ತೆಯಾಗಿತ್ತು. ಘಟನೆ ನಡೆದ ಕೆಲ ದಿನಗಳ ಬಳಿಕ ಅಂಕೋಲಾ ಠಾಣೆಗೆ ತೆರಳಿ ದರೋಡೆ ಪ್ರಕರಣ ದಾಖಲಿಸಿದ್ದರು. ಬಜಾಲ್ ನ ಕುಖ್ಯಾತ ರೌಡಿ ತಲ್ಲತ್ ಗ್ಯಾಂಗ್‌ನ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.