ಮುಂಬೈ: ಬಾಲಿವುಡ್ ಹಿರಿಯ ನಟ, ನಿರ್ದೇಶಕ ಮನೋಜ್ ಕುಮಾರ್ನಿ ಧನಹೊಂದಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅದರಂತೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಸುಕಿನ ಜಾವ ನಿಧನಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. 1957 ರ ‘ಫ್ಯಾಷನ್’ ಚಿತ್ರದೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.. ಅವರ ‘ಕಚ್ಚಿ ಕಿ ಗುಡಿಯಾ’ ಚಿತ್ರ 1960 ರಲ್ಲಿ ಬಿಡುಗಡೆಯಾಯಿತು. ಮನೋಜ್ ಕುಮಾರ್ ಅವರು ಉಪ್ಪಾರ್’, ‘ಪತ್ತರ್ ಕೆ ಸನಮ್’, ‘ರೋಟಿ ಕಪ್ಪಾ ಔರ್ ಮಕಾನ್’, ‘ಸನ್ಯಾಸಿ’ ಮತ್ತು ‘ಕ್ರಾಂತಿ’ಯಂತಹ ಅದ್ಭುತ ಚಿತ್ರಗಳನ್ನು ನೀಡಿದರು.