ಕೆಂಜಾರು – ಗಂಡೊಟ್ಟು ಧರ್ಮನೇಮ ಚಪ್ಪರ ಮುಹೂರ್ತ

ಸುರತ್ಕಲ್ : ಕೆಂಜಾರು- ಗಂಡೊಟ್ಟು ಕುಟುಂಬಿಕರ ಸೇವಾರೂಪದಲ್ಲಿ ಏ.10ರಂದು ಗುರುವಾರ ನಡೆಯಲಿರುವ ‘ಧರ್ಮನೇಮ’ದ ಚಪ್ಪರ ಮುಹೂರ್ತ ಸಾಂಪ್ರದಾಯಿಕವಾಗಿ ಜರುಗಿತು.
ಏ.10ರಂದು ಬೆಳಗ್ಗೆ 9ಕ್ಕೆ ತಾರಬರಿ ಜುಮಾದಿಬಂಟ ಪರಿವಾರ ದೈವಗಳ ಭಂಡಾರ ಆಗಮಿಸಿ ರಾತ್ರಿ 8.30ಕ್ಕೆ ಧರ್ಮನೇಮ ಜ್ಯೋತಿರ್ವಿಜ್ಞಾನಿ ಪ್ರಕಾಶ ಮಾರ್ಗದರ್ಶನದಲ್ಲಿ ಸಂಪನ್ನಗೊಳ್ಳಲಿದೆ. ಅದೇ ದಿನ ಬೆಳಗ್ಗೆ ಕಲಶ ಪ್ರತಿಷ್ಠೆ, ಪ್ರಧಾನ ಹೋಮ, ಕಲಶ ಪ್ರತಿಷ್ಠಾ ಹೋಮ, ನವನಿರ್ಮಾಣಗೊಂಡ ಧರ್ಮ ಚಾವಡಿಯಲ್ಲಿ ದೈವಗಳ ಪುನ‌ರ್ ಪ್ರತಿಷ್ಠೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಏ.8ರಂದು ನಾನಾ ಧಾರ್ಮಿಕ ವಿಧಿ ಗಳು, ಏ.9ರಂದು ಬೆಳಗ್ಗೆ ಶ್ರೀ ಸತ್ಯನಾರಾಯಣ ಪೂಜೆ, ನೂತನವಾಗಿ ನಿರ್ಮಿಸಲಾದ ಚಾವಡಿಯ ಪ್ರವೇಶ ಧಾರ್ಮಿಕ, ಸಾಂಪ್ರದಾಯಿಕವಾಗಿ ನೆರವೇರಲಿದೆ.
ಭಾನುವಾರ ಜರುಗಿದ ಚಪ್ಪರ ಮುಹೂರ್ತದ ವೇಳೆ ತೋಕೂರುಗುತ್ತು ದಿವಾಕರ ಆಳ್ವ, ತಾರಬರಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಶೆಟ್ಟಿ ಚಿಕ್ಕಪರಾರಿ, ವಾಸು ಜೆ.ಸಾಲ್ಯಾನ್, ತಾರಬರಿ ದೈವಸ್ಥಾನದ ಆರ್ಚಕ ಮಂಜು
ಪೂಜಾರಿ ಭಂಡಾರ ಮನೆ, ಜಗನ್ನಾಥ ಸಾಲ್ಯಾನ್ ಕರಂಬಾರು, ಶ್ರೀಕರ ಶೆಟ್ಟಿ ತೋಕೂರುಗುತ್ತು, ನಿತಿನ್ ಶೆಟ್ಟಿ ಚಿಕ್ಕಪರಾರಿ, ಭಾಸ್ಕರ ಶೆಟ್ಟಿ, ಕೇಶವ ಶೆಟ್ಟಿ, ಗಂಡೊಟ್ಟು ಸಂಜೀವ ಶೆಟ್ಟಿ ಯೋಗೀಶ್ ಆಳ್ವ ಆಡ್ಕ, ರಾಕೇಶ್ ಮಡಿವಾಳ, 16 ಗುತ್ತುಮನೆತನ ಹಾಗೂ ಗಂಡೊಟ್ಟು ಮನೆ ರಾಮಣ್ಣ ಶೆಟ್ಟಿ ಮತ್ತು ಕುಟುಂಬಿಕರು ಉಪಸ್ಥಿತರಿದ್ದರು.

error: Content is protected !!