ಆಂಧ್ರಪ್ರದೇಶ: ಹಕ್ಕಿ ಜ್ವರ ಎಂದು ಕರೆಯಲ್ಪಡುವ ಏವಿಯನ್ ಇನ್‌ಫ್ಲುಯೆನ್ಸ್‌ನಿಂದ ಮಾನವನ ಮೊದಲ ಸಾವು ಪ್ರಕರಣ ವರದಿಯಾಗಿದೆ. ಎರಡು ವರ್ಷದ ಹೆಣ್ಣುಮಗು ಈ ಹಕ್ಕಿ ಜ್ವರದಿಂದ ಸಾವನ್ನಪ್ಪಿದ್ದು, ಇದೇ ಮೊದಲ ಪ್ರಕರಣ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಪ್ರಕರಣ ವರದಿಯಾಗಿರುವುದು ಆಂಧ್ರಪ್ರದೇಶದಲ್ಲ,
ಇತ್ತೀಚೆಗೆ ಹಕ್ಕಿ ಜ್ವರವು ಹೆಚ್ಚಾಗಿ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಲಕ್ಷಾಂತಕ ಕೋಳಿಗಳು ಸಾವನ್ನಪ್ಪಿದ್ದಲ್ಲದೆ, ಮಾಂಸ ಸೇವನೆ ಮಾಡದಂತೆಯೂ ಎಚ್ಚರಿಕೆ ಕೊಡಲಾಗಿತ್ತು. ಆದರೆ. ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ನರಸರಾವ್‌ಪೇಟೆಯ ಎರಡು ವರ್ಷದ ಬಾಲಕಿ ಈ H5N1 ವೈರಸ್‌ಗೆ ಬಲಿಯಾಗಿದ್ದಾಳೆ ಎಂದು ವರದಿಗಳು ಹೇಳಿವೆ. ಎರಡು ವರ್ಷದ ಮಗುವೊಂದು ಈ ವೈರಸ್‌ಗೆ ಬಲಿಯಾಗಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಾವನ್ನು ದೃಢಪಡಿಸಿದೆ. ಅಲ್ಲದೆ ಸರ್ಕಾರಕ್ಕೆ ಎಚ್ಚರಿಕೆಯೂ ನೀಡಿದೆ. ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಆ ಮಗುವನ್ನು ಮಾರ್ಚ್ 4ರಂದು ಮಂಗಳಗಿರಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿರುವಾಗ ಮಾರ್ಚ್ 16ರಂದು ಮಗು ಸಾವನ್ನಪ್ಪಿತು. ನಂತರ ಮಾದರಿಗಳನ್ನು ಪರೀಕ್ಷೆಗಾಗಿ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಯಿತು. ಏಪ್ರಿಲ್ 1ರಂದು ಇದರ ವರದಿ ಬಂದಿದ್ದು, ಮಗುವಿನ ಸಾವಿಗೆ ಹಕ್ಕಿ ಜ್ವರವೇ ಕಾರಣ ಎಂದು ದೃಢಪಟ್ಟಿದೆ.