ನವದೆಹಲಿ: ದೇವಮಾನವ ನಿತ್ಯಾನಂದ ಸ್ವಾಮಿ ನಿಧನ ಹೊಂದಿದ್ದಾರೆ ಎಂಬ ಸುದ್ದಿ ವೈರಲ್ ಆದ ಬೆನ್ನಲ್ಲೇ ತಾನು ಸತ್ತಿಲ್ಲ, ಬದುಕಿದ್ದೇನೆ ಆರೋಗ್ಯವಾಗಿದ್ದೇನೆ ಎನ್ನುವ ಹೇಳಿಕೆ ಕೈಲಾಸದಿಂದ ಬಂದಿದೆ.
ನಿತ್ಯಾನಂದ ಸತ್ತಿದ್ದಾಗಿ ಅವರ ಸಹೋದರಿಯ ಮಗ ಸುಂದರೇಶ್ವರನ್ ಬಹಿರಂಗಪಡಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ನಿತ್ಯಾನಂದ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು, ಏಪ್ರಿಲ್ 1 ರಂದು ನಿತ್ಯಾನಂದ ಸಾವನ್ನಪ್ಪಿದ್ದಾರೆನ್ನುವ ಸುದ್ದಿಯಿಂದ ಅವರ ಅಭಿಮಾನಿಗಳು, ಭಕ್ತರು ವಿಚಲಿತರಾಗಿದ್ದರು. ಕೆಲವರು ಇದು ಎಪ್ರಿಲ್ ಫೂಲ್ ಆಗಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ಕೈಲಾಸದ ಜನರು ಈ ಕುರಿತು ಸ್ಪಷ್ಟನೆ ನೀಡಿದ್ದು, ನಿತ್ಯಾನಂದ ಸಾವನ್ನಪ್ಪಿಲ್ಲ ಎಂದಿದ್ದಾರೆ. ಅಲ್ಲದೆ ನಿತ್ಯಾನಂದ ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ಈ ವದಂತಿಗಳನ್ನು ತಳ್ಳಿಹಾಕಿದರು ಮತ್ತು ತಾವು ಸತ್ತಿಲ್ಲ ಆದರೆ ಸಮಾಧಿ ಸ್ಥಿತಿಯಲ್ಲಿದ್ದೆ ಇದು ಆಳವಾದ ಧ್ಯಾನ ಮಾಡುತ್ತಿದ್ದೆ. ನನ್ನ ಸಾವಿನ ಸುದ್ದಿಯನ್ನು ಹಬ್ಬಿಸಿದವರು ನನ್ನ ವಿರೋಧಿಗಳು, ಸದ್ಯದಲ್ಲಿಯೇ ಸಾವರ್ಜನಿಕ ದರ್ಶನ ನೀಡುವುದಾಗಿ ಸ್ಪಷ್ಟನೆ ನೀಡಿದ್ದಾರೆ.