ಸುರತ್ಕಲ್ ಪಡ್ರೆ ಶ್ರೀ ಧೂಮಾವತಿ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ದಿನಕರ ಶೆಟ್ಟಿ ಆಯ್ಕೆ


ಸುರತ್ಕಲ್: ಇತಿಹಾಸ ಪ್ರಸಿದ್ಧ ಪಡ್ರೆ ಶ್ರೀ ಧೂಮಾವತಿ ದೈವಸ್ಥಾನದ ಆಡಳಿತ ಮಂಡಳಿಯ ಸಭೆಯು ಊರಿನ ಗಡಿ ಪ್ರಧಾನರು- ಗುರಿಕಾರರು ಹಾಗೂ ಊರ ಹತ್ತು ಸಮಸ್ತರನ್ನು ಒಳಗೊಂಡ – ಪಡ್ರೆ, ಕೊಡಿಪಾಡಿ, ಅರಂತಬೆಟ್ಟು, ಮದಕಾಡಿ, ಮುಂಚೂರು, ದಾಮು ಶೆಟ್ಟಿ, ಬೀರಣ್ಣ ಶೆಟ್ಟಿ, ಭಂಡಾರ ಮನೆ ಮುಕ್ಕ ಹಾಗೂ ಮಿತ್ರಪಟ್ಟದವರು ಅನಾದಿ ಕಾಲದಿಂದಲೂ ಆರಾಧಿಸಿ ಕೊಂಡು ಬಂದಿರುವ ದೈವಕ್ಕೆ ಸಂಬಂಧಪಟ್ಟ ಗುರಿಕಾರರನ್ನು ಒಳಗೊಂಡು ದಿನಾಂಕ 16.03.2025ರಂದು ದೈವಸ್ಥಾನದ ವಠಾರದಲ್ಲಿ ಊರ, ಪರವೂರ ಭಕ್ತರ ಮಹಾಸಭೆಯಲ್ಲಿ ಸರ್ವಾನುಮತದಿಂದ ನೂತನ ಆಡಳಿತ ಮಂಡಳಿಯ ಅಧ್ಯಕರನ್ನಾಗಿ ದಿನಕರ ಶೆಟ್ಟಿ ತೆಂಕು ಮೇಗಿನ ಮನೆ ಪಡ್ರೆ ಇವರನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ಗೌರವಾಧ್ಯಕ್ಷರಾಗಿ ದೇವಣ್ಣ ಶೆಟ್ಟಿ ಬಡಗು ಮೇಗಿನಮನೆ ಪಡ್ರೆ, ಉಪಾಧ್ಯಕ್ಷರಾಗಿ ಸತೀಶ್ ಮುಂಚೂರು, ಲೋಕಯ್ಯ ಶೆಟ್ಟಿ ಮುಂಚೂರು, ಪ್ರಧಾನ ಕಾರ್ಯದರ್ಶಿಯಾಗಿ ಲತೀಶ್ ಶೆಟ್ಟಿ ಪಡ್ರೆ, ಕೋಶಾಧಿಕಾರಿಯಾಗಿ ಯೋಗೀಶ್ ಕರ್ಕೇರ ಮುಕ್ಕ, ಜೊತೆ ಕಾರ್ಯದರ್ಶಿಯಾಗಿ ಮುಖೇಶ್ ಶೆಟ್ಟಿ ಪಡ್ರೆ, ಸುನಿಲ್ ಮಿತ್ರಪಟ್ಟ, ಶ್ರೀಮತಿ ಸಪ್ನಾ ಲಕ್ಷ್ಮೀಶ ಆಳ್ವ, ಜೊತೆ ಕೋಶಾಧಿಕಾರಿಯಾಗಿ ಸಿ.ಎ ಅಪೇಕ್ಷ ಶೆಟ್ಟಿ ಮುಕ್ಕ ಇವರನ್ನು ಆಯ್ಕೆ ಮಾಡಲಾಯಿತು.
ದೈವಸ್ಥಾನಕ್ಕೆ ಸಂಬಂಧಪಟ್ಟ ಗಡಿ ಮನೆತನದ ಖಾಯಂ ಸದಸ್ಯರನ್ನಾಗಿ ಸುಬ್ರಮಣ್ಯ ಭಟ್ ರಾಯರ ಮನೆ ಮುಕ್ಕ, ಜಗನ್ನಾಥ ಅತ್ತಾರ್ ಕೊಡಿಪಾಡಿ ಬಾಳಿಕೆ, ಬಾಬು ಭಂಡ್ರಿಯಾಲ್ ಪಡ್ರೆ ಚಾವಡಿ ಮನೆ, ದೇವೇಂದ್ರ ಪೂಜಾರಿ ಭಂಡಾರಮನೆ ಮುಕ್ಕ, ಕರಿಯ ಮಾರ್ಲರು ಮದಕಡಿ ಅರಂತಬೆಟ್ಟು ಮನೆತನ, ಮುಂಚೂರು ಮನೆತನ, ಬೀರಣ್ಣ ಶೆಟ್ಟಿ ಮನೆತನ, ದಾಮು ಶೆಟ್ರ ಮನೆತನ, ಸೊರಪರ ಮನೆತನ, ಬಂಟ ಪೂಜಾರಿ ( ಧೀರಜ್ ಅಮಿನ್ ) ಬಂಕಿ ನಾಯ್ಕರು, ಭೋಜ ಕೋಟ್ಯಾನ್ ಮುಕ್ಕ ಪಾಡಿ ಮನೆ, ಅಶೋಕ್ ಮೊಯ್ಲಿ ಮುಕ್ಕ ಹಾಗೂ ಮಿತ್ರಪಟ್ಟ ಮನೆತನದವರು ಮತ್ತು ಇತರ 80 ಮಂದಿ ಸದಸ್ಯರನ್ನು ಆಡಳಿತ ಮಂಡಳಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಕೇಶವ ಶೆಟ್ಟಿ ಗಣೇಶನಗರ ಪಡ್ರೆ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!