ಕೋರ ಅಂದ್ರೆ ಕೊರಗಜ್ಜ ಸ್ವಾಮಿ…! ಸಿನಿಮಾದಲ್ಲಿದೆ ಕೊರಗಜ್ಜನ ನರ್ತನ ʻಕೋರʼ ಸಿನಿಮಾದ ಬಗ್ಗೆ ನಿರ್ದೇಶಕ ಹೇಳಿದ್ದೇನು?

ಮಂಗಳೂರು: ಕೋರ ಅಂದ್ರೆ ʻಕೊರಗಜ್ಜ ಸ್ವಾಮಿʼ. ನಮ್ಮ ಸಿನಿಮಾದಲ್ಲಿ ದೈವಾರಾಧನೆಯನ್ನು ಒಳಗೊಂಡಿದೆ, ಒಂದು ದೃಶ್ಯದಲ್ಲಿ ಕೊರಗಜ್ಜನ ದರ್ಶನದ ದೃಶ್ಯವಿದೆ ಇದೆ ಎಂದು ʻಕೋರʼ ಸಿನಿಮಾದ ಬಗ್ಗೆ ಚಿತ್ರ ನಿರ್ದೇಶಕ ಒರಟ ಶ್ರೀ ಮಾಹಿತಿ ನೀಡಿದರು.


ಅವರು ಮಂಗಳೂರಿನ ಓಸಿಯನ್‌ ಪರ್ಲ್ ಹೋಟೆಲ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕುರಿತು ಮಾತನಾಡಿದರು.

ಮುಂದುವರಿದು ಮಾತನಾಡಿದ ಅವರು, ಬುಡಕಟ್ಟು ಜನಾಂಗದಲ್ಲಿ ಕೋರ ರೀತಿಯ ಅನೇಕ ಹೆಸರುಗಳಿವೆ. ನಮ್ಮದು ಬುಡಕಟ್ಟು ಜನಾಂಗದ ಕುರಿತ ಚಿತ್ರವಾಗಿದೆ. ಇದರಲ್ಲಿ ದೈವಾರಾಧನೆಯ ದೃಶ್ಯಗಳಿವೆ. ಅರಣ್ಯಾಧಿಕಾರಿ ದಿಡ್ಡಲ್ಲಿ ಬುಡಕಟ್ಟು ಜನಾಂಗದವರಿಗೆ ದೌರ್ಜನ್ಯ ಎಗಿರುವ ಕುರಿತು ಚಿತ್ರವನ್ನು ಮಾಡಲಾಗಿದೆ. ಇದೊಂದು ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ನಾನು ಖುದ್ದಾಗಿ ಅದನ್ನು ನೋಡಿಬಂದಿದ್ದೆ. ಅದನ್ನೇ ಚಿತ್ರವನ್ನಾಗಿ ಮಾಡಲಾಗಿದೆ ಎಂದು ವಿವರಿಸಿದರು.

ಚಿತ್ರದಲ್ಲಿ ದೈವ ದೇವರ ಅವಮಾನ ಮಾಡುತ್ತಿದೆಯೇ? ಇದನ್ನೇ ಮುಂದಿಟ್ಟು ಜನರು ವೇಷತೊಟ್ಟು ಅವಮಾನ ಮಾಡುವ ಸಾಧ್ಯತೆ ಇದೆಯಲ್ವಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕೊರಗಜ್ಜನ ಭಕ್ತ. ಎಲ್ಲಿಯೂ ದೈವದ ಅವಮಾನ ಮಾಡಿಲ್ಲ. ಇದೊಂದು ದೈವಶಕ್ತಿಯನ್ನು ಮೆರೆಸುವ ಚಿತ್ರವಾಗಿದ್ದು, ಎಲ್ಲಿಯೂ ಉತ್ಪ್ರೇಕ್ಷೆ ಮಾಡಿ ತೋರಿಸಿಲ್ಲ. ನಮ್ಮ ಚಿತ್ರಕ್ಕೆ ಜನಾರ್ದನ ಪೂಜಾರಿ ನಿಂತಿಕಲ್ಲ್‌ ಎಂಬವರು ಪೂಜೆ ಮಾಡಿ ಚಾಲನೆ ನೀಡಿದ್ದಾರೆ. ಅವರೇ ಚಿತ್ರದಲ್ಲಿ ಕೊರಗಜ್ಜನ ಪಾತ್ರವನ್ನು ಮಾಡಿದ್ದಾರೆ. ಕುಕ್ಕೆಯಲ್ಲಿಯೂ ಚಿತ್ರೀಕರಣ ಮಾಡಿದ್ದೇವೆ. ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಚಿತ್ರೀಕರಣದ ಸಂದರ್ಭ ಕಟ್ಟುನಿಟ್ಟಿನ ನಿಯಮ ಮಾಡಿದ್ದೇವೆ. ನಾವ್ಯಾರೂ ಮಾಂಸಹಾರ ಸೇವಿಸಿಲ್ಲ ಎಂದು ಒರಟ ಶ್ರೀ ವಿವರಿಸಿದರು.


ಚಿತ್ರದಲ್ಲಿ ನಟಿಸಿದ ಸುನಾಮಿ ಕಿಟ್ಟಿ ಮಾತನಾಡಿ, ಚಿತ್ರೀಕರಣದ ಸಂದರ್ಭ ಮೈಗೆ, ಕಣ್ಣಿಗೆ ಏಟು ಬಿದ್ದಿತ್ತು. ಚಿತ್ರಕ್ಕಾಗಿ ಸಾಕಷ್ಟು ಸಮರ್ಪಣೆ ಮಾಡಲಾಗಿದೆ. ಈ ಚಿತ್ರದಲ್ಲಿ ನಾನು ಖಳನಾಯಕನಾಗಿ ನಟಿಸಿದ್ದೇವೆ. ಎಲ್ಲರೂ ಬೆಂಬಲಿಸುಂತೆ ಕರೆನೀಡಿದರು.
ಚಿತ್ರನಿರ್ಮಾಪಕ ಶ್ರೀಮೂರ್ತಿ ಉಪಸ್ಥಿತರಿದ್ದರು.

ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ⤵️

error: Content is protected !!