ಗಡಗಡ ಕಂಪಿಸಿದ ವಿಜಯಪುರ: ನಿಗೂಢ ಶಬ್ದಕ್ಕೆ ಬೆಚ್ಚಿಬಿದ್ದ ಜನರು

ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ, ಕಳ್ಳಕವಟಗಿ, ಘೋಣಸಗಿ, ಹಡಗಿನಾಳ ಹಾಗೂ ಇತರೆ ಗ್ರಾಮಗಳಲ್ಲಿ ಇಂದು ಭೂಮಿಯಾಳದಿಂದ ಭಾರಿ ಶಬ್ದ ಕೇಳಿಬಂದಿದೆ.

ನಗರದ ಕೆಹೆಚ್​​ಬಿ ಕಾಲೊನಿ, ಬ್ಯಾಂಕರ್ಸ್ ಕಾಲೊನಿ, ಸದಾಶಿವ ನಗರ, ಆಕೃತಿ ಕಾಲೊನಿಗಳ ನಿವಾಸಿಗಳಿಗೂ ಶಬ್ದ ಕೇಳಿಸಿದೆ.

ಭೂಮಿ ನಡುಗಿದಂತೆ ಅನುಭವವಾಗಿದೆ. ಭೂಕಂಪನಕ್ಕೆ ಮನೆಯೊಳಗಿನ ಪಾತ್ರೆಗಳು ಅಲ್ಲಾಡಿ ಬಿದ್ದಿವೆ ಎಂದು ಜನರು ಹೇಳಿದ್ದಾರೆ.

ಸದ್ಯ ಇದು ಭೂಕಂಪವೇ ಅಥವಾ ಭೂಮಿಯಿಂದ ಬಂದಿರುವ ಶಬ್ದವೇ ಎಂಬುದರ ಬಗ್ಗೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಬೇಕಿದೆ.

2022ರ ಆಗಸ್ಟ್ ನಲ್ಲಿಯೂ ವಿಜಯಪುರದಲ್ಲಿ ಭೂಕಂಪನದ ಅನುಭವವಾಗಿತ್ತು. 2023ರಲ್ಲಿಯೂ ಇದರ ಅನುಭವವಾಗಿತ್ತು.

error: Content is protected !!