ಕುಂದಾಪುರ: ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಬಪ್ಪೆಹಕ್ಲುವಿನಲ್ಲಿರುವ ಜನಾರ್ದನ ಎಂಬವರ ಮನೆಗೆ ನುಗ್ಗಿ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿಯ ಆಭರಣ, ಲ್ಯಾಪ್ಟ್ಯಾಪ್‌ಗಳನ್ನು ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಉಪ್ಪುಂದು ನಿವಾಸಿಗಳಾದ ಯತಿರಾಜ್, ಮಹೇಶ್, ಯಳಜಿತ್ ಮತ್ತು ಕಾರ್ತಿಕ್ ನಾಗೂರು ಬಂಧಿತ ಆರೋಪಿಗಳು
ಜನಾರ್ದನ ಅವರು ಮನೆಗೆ ಬೀಗ ಹಾಕಿ ಮನೆ ಸಮೀಪದ ಯಕ್ಷಗಾನ ಕಾರ್ಯಕ್ರಮಕ್ಕೆ ಮನೆಯವರೊಂದಿಗೆ ಹೋಗಿದ್ದರು. ಈ ವೇಳೆ ಖದೀಮರು ಮನೆಗೆ ನುಗ್ಗಿ ಕೃತ್ಯ ಎಸಗಿದ್ದರು. ಜನಾರ್ದನರು ವಾಪಸು ಮರಳಿ ಬಂದಾಗ ಕಳವು ಕೃತ್ಯ ಬೆಳಕಿಗೆ ಬಂದಿತ್ತು.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳಿಂದ ಮೊಬೈಲ್ ಫೋನ್‌ಗಳು ಸೇರಿದಂತೆ ಕಳವು ಮಾಡಿದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವೆಲ್ಲದರ ಒಟ್ಟು ಮೌಲ್ಯ ಸುಮಾರು 3 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.