ನವದೆಹಲಿ: ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಣಿಗಳನ್ನು ಮಾರಾಟ ಮಾಡಿ, ತನ್ನ ಕಣ್ಣಿನ ಮೂಲಕ ದಿಢೀರ್ ವೈರಲ್ ಆದ ಮೊನಸಲಿಸಾ ಚಿತ್ರ ತೆರೆಗೆ ಅಪ್ಪಳಿಸಲಿದೆ ಎನ್ನುತ್ತಿದ್ದಂತೆ ಆಕೆಯ ನಿರ್ದೇಶಕ ಅತ್ಯಾಚಾರ ಕೇಸಿನಲ್ಲಿ ಜೈಲು ಪಾಲಾಗಿದ್ದಾನೆ. ಹೀಗಾಗಿ ಮೊನಲಿಸಾ ಸಿನಿಮಾ ಕನಸು ನುಚ್ಚುನೂರಾಗಿದೆ.
ಹೀಗಾಗಿ ಮೊನಲಿಸಾ ರುದ್ರಾಕ್ಷಿ ಮಣಿ ಮಾಲೆಗಳನ್ನು ಮಾರಾಗಲು ಮುಂದಾಗಿದ್ದಾಳೆ. ಮತ್ತೆ ಆ ಕೆಲವನ್ನೇ ಮಾಡು, ಸಿನಿಮಾ ನಮಗ್ಯಾರಿಗೂ ಸೆಟ್ ಆಗಿ ಬರಲ್ಲ ಎಂದು ಆಕೆಯ ಸಹೋದರ, ಸಹೋದರಿ, ತಾಯಿ ಕರೆ ಮಾಡಿ ತಿಳಿಸಿದ್ದಾರೆ.
ಸನೋಜ್ ಮಿಶ್ರಾನ ಮೇಲೆ ಅತ್ಯಾಚಾರ ಸೇರಿ ಹಲವು ಆರೋಪಗಳಿವೆ. ಜಾಮೀನು ಸಿಕ್ಕರೂ ಒಂದು ವರ್ಷ ಜೈಲಿನಿಂದ ಹೊರಬರುವುದು ಅನುಮಾನ. ಹೀಗಾಗಿ ಇವನು ಇನ್ನು ಮುಂದೆ ಸಿನಿಮಾ ಮಾಡುವುದು ಡೌಟ್. ಅಲ್ಲದೆ ಮೊನಲಿಳಾ ಸೌಂದರ್ಯದ ಆಸೆಗೆ ಬಿದ್ದು, ಅವಳನ್ನು ಮಂಗ ಮಾಡಿರುವ ಸಾಧ್ಯತೆಯೂ ಇದೆ. ಹೀಗಾಗಿ ಸಿನಿಮಾ ರಂಗದಿಂದಲೇ ಹೊರಡು ಎಂದು ಮನೆ ಮಂದಿ ತಿಳಿಸಿದ್ದಾರೆ ಎನ್ನಲಾಗಿದೆ.
ಬಂಧನದಿಂದ ಸದ್ಯ ಮಣಿಪುರ್ ಸಿನಿಮಾ ಸಾಧ್ಯತಗಳು ಕ್ಷೀಣಿಸಿವೆ. ಹಾಗಂತ ಮತ್ತೊದು ಸಿನಿಮಾದಲ್ಲಿ ಮೊನಾಲಿಸಾಳಿಗೆ ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ. ಕಾರಣ ಮೊನಾಲಿಸಾ ಈಗಷ್ಟೇ ನಟನೆ ಕಲಿಯುತ್ತಿದ್ದಾಳೆ. ಹೀಗಾಗಿ ತಕ್ಷಣವೇ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಆದರೆ ಮೂಲಗಳ ಪ್ರಕಾರ ಮೊನಾಲಿಸಾ ಧಾರವಾಹಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಗೆಸ್ಟ್ ಅಪ್ಪಿಯರೆನ್ಸ್ ಪಾತ್ರದಲ್ಲಿ ಪ್ರಮುಖ ಧಾರವಾಹಿಯಲ್ಲಿ ಮೊನಾಲಿಸಾ ಕಾಣಿಕೊಳ್ಳಲಿದ್ದಾರೆ ಅನ್ನೋ ಮಾಹಿತಿಗಳು ಕೇಳಿಬರುತ್ತಿದೆ.