“ಶಿಸ್ತಿನ ಬಗ್ಗೆ ಮಾತಾಡುವ ಸ್ಪೀಕರ್‌ ಅವರೇ ನೀವು ಅಂದು ಎರಡು ಬಾರಿ…..” 18 ಶಾಸಕರನ್ನು ಅಮಾನತು ಮಾಡಿದ ಯು.ಟಿ.ಖಾದರ್‌ ವಿರುದ್ಧ ತಿಲಕ್‌ ರಾಜ್‌ ಕೃಷ್ಣಾಪುರ ಹೇಳಿದ್ದೇನು?


ಮಂಗಳೂರು
: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ| ವೈ ಭರತ್ ಶೆಟ್ಟಿ ಸಹಿತ 18 ಶಾಸಕರನ್ನು ವಿಧಾನ ಸಭೆಯಿಂದ ಅಮಾನತು ಮಾಡಿರುವ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್‌ ನಡೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತಿಲಕ್‌ ರಾಜ್‌ ಕೃಷ್ಣಾಪುರ ಖಂಡಿಸಿದ್ದಾರೆ.
ಮಂಗಳೂರಿನ ಪತ್ರಿಕಾಭವನದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತಾಡಿದ ಅವರು, ಅವರು, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಡಾ| ವೈ. ಭರತ್ ಶೆಟ್ಟಿಯವರು ಕ್ಷೇತ್ರದಲ್ಲಿ ಪ್ರಥಮ ಅವಧಿಯಲ್ಲಿ 2200 ಕೋಟಿಗೂ ಹೆಚ್ಚಿನ ಅನುದಾನವನ್ನು ಮಂಗಳೂರು ಉತ್ತರ ಕ್ಷೇತ್ರಕ್ಕೆ ತಂದು ಸಮಗ್ರ ಅಭಿವೃದ್ಧಿ ಮಾಡಿದ ಅಭಿವೃದ್ಧಿಯ ಹರಿಕಾರ. ಮಾನ್ಯ ಸ್ಪೀಕರ್‌ರವರೇ ವಿಧಾನ ಸಭೆಯ ಬಾವಿಯಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಅದನ್ನು ಸ್ವೀಕರಿಸುವ ಮನಸ್ಥಿತಿ ತಮಗೆ ಇರಬೇಕು. ತಾವು ಸರಕಾರದ ಭಾಗವಲ್ಲ, ನೀವು ಸರಕಾರದ ಪ್ರತಿನಿಧಿಯಾಗಿ ವರ್ತಿಸಿ ಅಮಾನತು ಮಾಡಿದ ನಿರ್ಧಾರ ಇಡೀ ರಾಜ್ಯದ ಜನತೆ ತಲೆತಗ್ಗಿಸುವ ರೀತಿ ಆಗಿದೆ ಎಂದು ಆರೋಪಿಸಿದರು.


ಮಾನ್ಯ ಸ್ಪೀಕರ್‌ರವರೇ ತಾವು ಶಿಸ್ತಿನ ಬಗ್ಗೆ ಮಾತನಾಡುತ್ತೀರಿ. ಆದರೂ ನೀವು ಎರಡು ಬಾರಿ ಅಮಾನತು ಆಗಿದ್ದೀರಿ. ಅದನ್ನು ನಾವು ಮರೆತಿಲ್ಲ. ಆಗ ಎಲ್ಲಿ ಹೋಗಿತ್ತು ನಿಮ್ಮ ಈ ಮಾತುಗಳು? ಎಂದು ಅವರು ಖಾದರ್‌ ಅವರನ್ನು ಪ್ರಶ್ನಿಸಿದ್ದಾರೆ.

ಶಾಸಕರು ಹನಿಟ್ರಾಪ್‌ನ ಬಗ್ಗೆ ಮಾತನಾಡುತ್ತಿರುವಾಗ ನಿಮ್ಮದೇ ಸಚಿವರು ಧ್ವನಿಗೂಡಿಸಿದ್ದರು. ಆಗ ಅದನ್ನು ಸಮರ್ಥವಾಗಿ ಎದುರಿಸುವ ಬದಲು ರಾಜ್ಯದ 18 ಶಾಸಕರನ್ನು ಅಮಾನತು ಮಾಡಿದಾಗ ರಾಜ್ಯದ ಜನತೆ ನಿಮ್ಮ ನಾಟಕೀಯ ರಾಜಕೀಯವನ್ನು ನೋಡುತ್ತಿದ್ದಾರೆ. ಸದನದ ಬಾವಿ ಪ್ರತಿಭಟಿಸಲು ಇರುವ ಸ್ಥಳ ನಿಮಗೆ ನೆನಪಿರಲಿ ಸ್ಪೀಕರ್‌ರವರೇ, ಅಂದು ಸ್ಪೀಕರ್‌ರವರನ್ನು ಕುತ್ತಿಗೆಯ ಪಟ್ಟಿ ಎಳೆದು ಅವಮಾನ ಮಾಡಿದ ಕಾಂಗ್ರೆಸ್‌ನ ನೀಚ ಬುದ್ಧಿಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ತಿಲಕ್‌ರಾಜ್‌ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಉತ್ತರ ಮಂಡಲದ ಸದಸ್ಯರಾದ ರಾಜೇಶ್ ಕೊಟ್ಟಾರಿ, ಭರತ್ ರಾಜ್ ಕೃಷ್ಣಾಪುರ , ಪೂಜಾ ಪೈ , ಆಶ್ರಿತ್ ನೋಂಡಾ , ಸಂದೀಪ್ ಪಚ್ಚನಾಡಿ, ರಣ್‌ದೀಪ್ ಕಾಂಚನ್‌, ಬಿಜೆಪಿ ಉತ್ತರ ದಕ್ಷಿಣ ಮಂಡಲದ ಸದಸ್ಯರು ಉಪಸ್ಥಿತರಿದ್ದರು.

error: Content is protected !!