ಬೆಳ್ತಂಗಡಿ : ಲೈನ್ ಮ್ಯಾನ್ ಕೆಲಸ ನಿರ್ವಹಿಸುತ್ತಿದದ್ದ ವ್ಯಕ್ತಿಯ ಮೃ*ತದೇಹ ಬೆಳ್ತಂಗಡಿ ತಾಲೂಕಿನ ನಾರವಿಯ ಅಡಿಂಜೆಯ ಟ್ರಾನ್ಸ್ ಫಾರ್ಮರ್ ಬಳಿ ಪತ್ತೆಯಾಗಿದೆ. ನಾರಾವಿಯ ತುಂಬೆ ಗುಡ್ಡೆ ಎಂಬಲ್ಲಿಯ ನಿವಾಸಿ ಕಿಟ್ಟಿ ಎಂದೇ ಜನಪ್ರಿಯರಾಗಿದ್ದ ಸುಧಾಕರ್(50) ನಿಗೂಢವಾಗಿ ಮೃತಪಟ್ಟ ವ್ಯಕ್ತಿ.
ಮಾ.26ರ ಸಂಜೆ ಸ್ಥಳೀಯರು ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿದ್ಯುತ್ ಆಕಸ್ಮಿಕದಿಂದ ನಡೆದ ದದುರಂತವೋ ಅಥವಾ ಇನ್ಯಾವುದೋ ಅಪಾಯ ಎದುರಾಯಿತೋ ಎಂದು ತಿಳಿದುಬಂದಿಲ್ಲ.
ಧಾಕರ್ ಕಳೆದ 27 ವರ್ಷಗಳಿಂದ ಮೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಬುಧವಾರ ಸಂಜೆ ಟ್ರಾನ್ಸ್ ಫಾರ್ಮರ್ ಬಳಿ ಹೋಗಿದ್ದ ಸಂದರ್ಭ ಅಲ್ಲೇ ಮೃ*ತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಸಂಶಯ:
ಮೃ*ತ ಸುಧಾಕರ್ ಕೈಯಲ್ಲಿ ಸಣ್ಣದೊಂದು ಗಾಯ ಹೊರತು ಪಡಿಸಿದರೆ ಬೇರೆ ಯಾವುದೇ ಗಾಯಗಳು ಪತ್ತೆಯಾಗಿಲ್ಲ. ವಿದ್ಯುತ್ ಆಘಾತಕ್ಕೀಡಾದ ಕುರುಹೂ ಸಹ ಕಂಡುಬಂದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಸಿಡಿಲಿನಿಂದ ಟ್ರಾನ್ಸ್‌ಫಾರ್ಮರ್ ಕಂಬದಲ್ಲಿ ವಿದ್ಯುತ್ ಆಘಾತ ಸಂಭವಿಸಿ ಸುಧಾಕರ್ ತುತ್ತಾಗಿದ್ದಾರೋ ಎಂದು ತಿಳಿದುಬಂದಿಲ್ಲ. ನಿನ್ನೆ ಸಂಜೆಯ ವೇಳೆ ಪರಿಸರದಲ್ಲಿ ಗುಡುಗು ಹಾಗು ಸಿಡಿಲು ಇತ್ತು ಎನ್ನುವುದರ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದ್ದು, ವರದಿ ಬಂದ ಬಳಿಕ ಸಾ*ವಿಗೆ ನಿಖರ ಕಾರಣ ತಿಳಿದುಬರಲಿದೆ. ಇದನ್ನು ಆದರಿಸಿ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ.