ತಿರುವನಂತಪುರಂ: ಫೋನಿನಲ್ಲಿ ತನ್ನ ತಾಯಿ ಜೊತೆಗೆ ಚೆನ್ನಾಗಿ ಮಾತಾಡಿದ್ದ ಹುಡುಗಿ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿರುವುದು ಕೇರಳದಲ್ಲಿ ಸಂಚಲನ ಸೃಷ್ಟಿಸಿದೆ. ತಿರುವನಂತಪುರಂನ ಚಕ್ಕೈ ರೈಲ್ವೆ ನಿಲ್ದಾಣ ಬಳಿ ವಾಸಿಸುತ್ತಿದ್ದ, ತ್ರಿವೆಂಡ್ರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇಮಿಗ್ರೇಷನ್ ವಿಭಾಗದಲ್ಲಿ ಸೆಕ್ಯುರಿಟಿ ಅಸಿಸ್ಟೆಂಟ್ ವಿಭಾಗದಲ್ಲಿ ಜೆಲಸ ಮಾಡುತ್ತಿದ್ದ ಮೇಘಾ ಮಧುಸೂಧನ್(25) ನಿಗೂಢವಾಗಿಮೃತಪಟ್ಟ ಯುವತಿ. ಈಕೆ ಶವ ಸೋಮವಾರ ಚಕ್ಕೈ ಬಳಿ ರೈಲ್ವೆ ಹಳಿಯಲ್ಲಿ ಪತ್ತೆಯಾಗುದೆ.
ಸೋಮವಾರ ಬೆಳಿಗ್ಗೆ ರಾತ್ರಿ ಪಾಳಿ ಮುಗಿಸಿ ತಮ್ಮ ವಾಸಸ್ಥಳಕ್ಕೆ ಹಿಂತಿರುಗುತ್ತಿದ್ದಾಗ ಅವರು ರೈಲ್ವೆ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮನೆಯವರೊಂದಿಗೆ ಸಂತೋಷದಿಂದ ಮಾತಾಡಿದ್ದ ಮೇಘಾ ಇದ್ದಕ್ಕಿದ್ದಂತೆ ಸಾವನ್ನಪ್ಪಿರುವುದು ಸಂಶಯಕ್ಕೆ ಕಾರಣವಾಗಿದೆ.
ಅವಳು ವಾಸಿಸುತ್ತಿದ್ದ ರೂಮಿಗೆ ಹೋಗಬೇಕಾದರೆ ರೈಲ್ವೆ ಹಳಿಯಲ್ಲಿ ನಡೆದುಕೊಂಡು ಬೇಕಾಗಿರಲಿಲ್ಲ. ರೈಲ್ವೆ ಹಳಿಯಲ್ಲಿ ನಡೆದುಕೊಂಡು ಬಂದಿದ್ದೇಕೆ? ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಬಂದಿರಬಹುದೇ ಅಥವಾ ಯಾರಾದರೂ ಈಕೆಯನ್ನು ಕೊಲೆ ಮಾಡಿ ಇಲ್ಲಿ ಎಸೆದಿರಬಹುದೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಕೆ ಸಾಯುಯವ ಮುಂಚೆ ಅಮ್ಮನ ಜೊತೆ ಚೆನ್ನಾಗಿ ಮಾತನಾಡಿದ್ದಳು. ಅದವಳ ಕೊನೆಯ ಕರೆಯಾಗಿತ್ತು. ಆದರೆ ಅದೇ ಫೋನ್ ಸಂಪೂರ್ಣ ನಾಶವಾಗಿರುವುದು ಕೂಡಾ ನಿಗೂಢತೆಯನ್ನು ಸೃಷ್ಟಿಸಿದೆ. ಪೊಲೀಸರು ಮೊಬೈಲ್ ಡಾಟಾ ರಿಟ್ರೀವ್ ಮಾಡಲು ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಪತ್ತನಂತಿಟ್ಟದ ಅತಿರುಮ್ಕಲ್‌ನಲ್ಲಿ ಮೇಘಾ ಮೃತದೇಹವನ್ನು ಅಂತ್ಯಕ್ರಿಯೆ ಮಾಡಲಾಯಿತು.